ಟಿಕೆಟ್ ಇದ್ದವರಿಗೆ ಡೋರ್​ ತೆಗೆಯದ ಟಿಕೆಟ್ ರಹಿತ ಪ್ರಯಾಣಿಕರು; ಎಸಿ ಕೋಚ್‌ನ ಗಾಜು ಪುಡಿ ಪುಡಿ!

WhatsApp Image 2024-04-19 at 6.36.41 PM
Published on

ನವದೆಹಲಿ: ಬೇಸಿಗೆಯ ಸಮಯದಲ್ಲಿ ದೂರದ ಊರುಗಳಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳವಾಗಿದೆ. ಅದರಲ್ಲೂ ಪ್ರಯಾಣಿಕರು ರೈಲಿನ ಪ್ರಯಾಣದ ಮೇಲೆ ಹೆಚ್ಚು ಅವಲಂಬಿತರಾದ ಕಾರಣ, ಈ ಬಿರು ಬಿಸಿಲಿಗೆ ಎಸಿ ಕೋಚ್​ ಆಯ್ದುಕೊಳ್ಳುತ್ತಾರೆ. ಅದೇ ರೀತಿ ಎಸಿ ಬೋಗಿಯಲ್ಲಿ ಟ್ರಾವೆಲ್ ಮಾಡಲೆಂದು ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರಿಗೆ ಟಿಕೆಟ್ ರಹಿತ ಪ್ರಯಾಣಿಕರು ಕೋಚ್​ವೊಳಗೆ ಪ್ರವೇಶಿಸಲು ನಿರ್ಬಂಧಿಸಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಎಸಿ ಕೋಚ್‌ನಲ್ಲಿ ಟಿಕೆಟ್ ಇಲ್ಲದೆ ಕುಳಿತಿದ್ದವರು ಒಳಗಿನಿಂದ ಡೋರ್ ಲಾಕ್ ಮಾಡಿದ್ದು, ಟಿಕೆಟ್ ಖರೀದಿಸಿದ್ದ ಪ್ರಯಾಣಿಕರಿಗೆ ಒಳಗೆ ಬರಲು ಅನುಮತಿಸಿಲ್ಲ. ಇದರಿಂದ ತೀವ್ರ ಆಕ್ರೋಶಕ್ಕೆ ತುತ್ತಾದ ಪ್ರಯಾಣಿಕರು ಪ್ರಾರಂಭದಲ್ಲಿ ಜೋರಾಗಿ ಕೂಗಾಡಿ, ಬಾಗಿಲು ತೆರೆಯುವಂತೆ ಬಡಿದಿದ್ದಾರೆ. ಇದ್ಯಾವುದಕ್ಕೂ ಒಪ್ಪದ ಟಿಕೆಟ್ ರಹಿತ ಪ್ರಯಾಣಿಕರು, ಡೋರ್ ಓಪನ್ ಮಾಡದೆ ಸುಮ್ಮನೆ ನೋಡುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ.

ತಾಳ್ಮೆ ಕಳೆದುಕೊಂಡ ಪ್ರಯಾಣಿಕರು ಗಾಜಿನ ಡೋರ್​ ಅನ್ನು ಪುಡಿ ಪುಡಿ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರದಿಯ ಪ್ರಕಾರ, ರೈಲು ಓಲ್ಡ್​ ಡೆಲ್ಲಿಯಿಂದ ಅಜಂಗಢಕ್ಕೆ ಚಲಿಸುತ್ತಿತ್ತು. ಇದು ಕೈಫಿಯತ್ ಎಕ್ಸ್‌ಪ್ರೆಸ್ (2226 - ಕೈಫಿಯಾತ್ ಎಕ್ಸ್‌ಪಿ) ಎಂದು ಹೇಳಲಾಗಿದೆ. ಇಲ್ಲಿ ತಪ್ಪು ಯಾರದು? ರೈಲ್ವೇ ಅಧಿಕಾರಿಗಳು ಅಥವಾ ಟಿಟಿಇ ಏನು ಮಾಡುತ್ತಿದ್ದರು? ಪರಿಶೀಲನೆ ಏಕೆ ಮಾಡಲಿಲ್ಲ ಎಂದು ನೆಟ್ಟಿಗರು ಪ್ರಶ್ನಿಸುವ ಮೂಲಕ ರೈಲ್ವೆ ಇಲಾಖೆ ವಿರುದ್ಧ ಕೆಂಡಕಾರಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net