

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಸುಗಮ ಮತದಾನಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಆಯೋಗವು ಪೊಲೀಸರು, ಮತಗಟ್ಟೆ ಅಧಿಕಾರಿಗಳನ್ನು ಕರೆದೊಯ್ಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳನ್ನು ಬಳಸಿಕೊಳ್ಳುತ್ತಿದೆ.
ಇನ್ನು ಈ ನಿಟ್ಟಿನಲ್ಲಿ ಮೇ 9 ಹಾಗೂ 10ನೇ ತಾರೀಖಿನಂದು ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಕುರಿತು ಪ್ರಕಟಣೆ ಒಂದನ್ನು ಹೊರಡಿಸಿರುವ ಆಯೋಗವು ದಿನಾಂಕ 10-05-2023ರಂದು ವಿಧಾನಸಭಾ ಚುನಾವಣೆಗೆ ಕೆ ಎಸ್ ಆರ್ ಟಿಸಿಯಿಂದ ಚುನಾವಣಾ ಕಾರ್ಯದ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಜಿಲ್ಲಾಡಳಿತಕ್ಕೆ ಮತ್ತು ಪೊಲೀಸ್ ಇಲಾಖೆಗೆ ನಿಯೋಜಿಸಲಾಗಿದೆ.
ಮತದಾನ ಕಾರ್ಯದ ಸುಗಮ ನಡೆಗಾಗಿ ಸಾರಿಗೆ ಬಸ್ಗಳನ್ನು ಮತಗಟ್ಟೆ ಸಿಬ್ಬಂದಿ, ಪೊಲೀಸರನ್ನು ಕೊಂಡೊಯ್ಯಲು ಸಾರಿಗೆ ಬಸ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡಲಾಗುತ್ತಿದೆ.
ಅದುದರಿಂದ ದಿನಾಂಕ 09-05-2023 ಮತ್ತು ಮತದಾನ ನಡೆಯುವಂತ ದಿನಾಂಕ 10-05-2023ರಂದು ನಿಗಮದ ವಾಹನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮತದಾನಕ್ಕೂ ಮುನ್ನಾ ದಿನವಾದಂತ ಮೇ.9 ಮತ್ತು ಮತದಾನದ ದಿನವಾದ ಮೇ.10ರಂದು KSRTC ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕ ಪ್ರಯಾಣಿಕರು ಸಹಕರಿಸುವಂತೆ, ಪರ್ಯಾಯ ವ್ಯವಸ್ಥೆಯೊಂದಿಗೆ ಸಂಚರಿಸಲು ವಿನಂತಿಸಿದೆ.
ರಾಜ್ಯದಲ್ಲಿ ಅಂದಾಜು 8,100 ಕೆಎಸ್‌ಆರ್‌ಟಿಸಿ ಬಸ್‌ಗಳಿದ್ದು, ಈ ಪೈಕಿ 3,700 ಬಸ್‌ಗಳು ಚುನಾವಣಾ ಕಾರ್ಯಕ್ಕೆ ಬುಕ್ ಆಗಿವೆ. ಮೇ 9 ಮತ್ತು 10 ರಂದು 4,400 ಕೆಎಸ್‌ಆರ್‌ಟಿಸಿ ಬಸ್‌ಗಳು ಮಾತ್ರ ಸಂಚಾರ ಮಾಡುತ್ತವೆ.