More

    ಪ್ರಧಾನಿ ಮೋದಿ ರೋಡ್​ ಶೋ ಮೂಲಕ ಶಕ್ತಿ ತುಂಬಿದ್ದಾರೆ: ಆಶ್ವತ್ಥನಾರಾಯಣ

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ದಿನಾಂಕ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಭಿನ್ನ ವಿಭಿನ್ನ ತಂತ್ರಗಾರಿಕೆ ಹೂಡುತ್ತಿದ್ದಾರೆ.

    ಇನ್ನು ಬೆಂಗಳೂರಿನಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಹಮ್ಮಿಕೊಂಡಿದ್ದ ರೋಡ್​ ಶೋಗೆ ಅಭೂತಪೂರ್ವ ಸ್ಪಂದನೆ ದೊರೆತ್ತಿದ್ದು ಈ ಬಗ್ಗೆ ಸಚಿವ ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ.

    ಶಕ್ತಿ ತುಂಬಿದ್ದಾರೆ

    ಈ ದಿನ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಮೋದಿ ಅವರು ರೋಡ್ ಶೋ ಮಾಡಿದ್ದಾರೆ. ಎಲ್ಲರೂ ಮೋದಿಯನ್ನ ನೋಡಿದ್ದಾರೆ ಸಾವಿರಾರು ಜನ ಅವರಿಗೆ ಸ್ವಾಗತ ನೀಡಿದ್ದಾರೆ.

    ನಮ್ಮ ಕ್ಷೇತ್ರದಲ್ಲೂ ಕೂಡ ಸಾವಿರಾರು ಜನ ಬಂದು ಸ್ವಾಗತ ಕೋರಿದ್ದಾರೆ ಅವರು ಬಂದು ನಮಗೆ ಶಕ್ತಿ ತುಂಬಿದ್ದಾರೆ ಎಂದು ಸಚಿವ ಆಶ್ವತ್ಥನಾರಾಯಣ ಪ್ರಧಾನಿ ಮೋದಿ ರೋಡ್​ ಶೋ ಕುರಿತು ಗುಣಗಾನ ಮಾಡಿದ್ದಾರೆ.

    Modi
    ಪ್ರಧಾನಿ ಸ್ಔಆಗತಕ್ಕೆ ಹಾಕಲಾಗಿದ್ದ ಹೋರ್ಡಿಂಗ್​

    ಕಾರ್ಯಕ್ರಮ ನಿಗದಿಯಾಗಿರಲಿಲ್ಲ

    ಇನ್ನು ರೋಡ್​ ಶೋ ವೇಳೆ ಪ್ರಧಾನಿ ಮೋದಿ ದೇವಸ್ಥಾನ ಭೇಟಿ ಕುರಿತು ಪ್ರತಿಕ್ರಿಯಿಸಿ ಯಾವುದೇ ಕಾರ್ಯಕ್ರಮ ನಿಗದಿಯಾಗಿರಲಿಲ್ಲ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಪ್ರಧಾನಿ ಮೆಗಾ ರೋಡ್ ಶೋ ಅಂತ್ಯ | ದಾರಿಯುದ್ದಕ್ಕೂ ಮೊಳಗಿದ ಮೋದಿ…ಮೋದಿ… ಘೋಷಣೆ

    ರೋಡ್ ಶೋ ನಲ್ಲಿ ದೇವಸ್ಥಾನ ಕಾರ್ಯಕ್ರಮ ಇಡುವುದಿಲ್ಲ ಈ ಬಗ್ಗೆ ನನಗೆ ಹೆಚ್ಚಾಗಿ ತಿಳಿದಿ. ಮಾಹಿತಿ ಪಡೆದು ತಿಳಿಸಲಾಗುವುದು ಎಂದು ಹೇಳಿದ್ದಾರೆ.

    ಕಾಂಗ್ರೆಸ್​ನ ಬ್ಯಾನ್​ ಮಾಡಬೇಕು

    ಇನ್ನು ರೋಡ್​ ಶೋ ವೇಳೆ ಆಂಜನೇಯನ ಫೋಟೋ ವಿಚಾರವಾಗಿ ಪ್ರತಿಕ್ರಿಯಿಸಿ ಬಜರಂಗದಳವನ್ನು ಬ್ಯಾನ್​ ಮಾಡುತ್ತೀವಿ ಎಂದು ಹೇಳುವ ಮೂಲಕ ಕಾಂಗ್ರೆಸ್​ನವರು ಹೊಸ ವಿವಾದವನ್ನು ಕೆದಕಿದ್ದಾರೆ.

    ಪ್ರಧಾನಿ ಮೋದಿ ರೋಡ್​ ಶೋ ಮೂಲಕ ಶಕ್ತಿ ತುಂಬಿದ್ದಾರೆ: ಆಶ್ವತ್ಥನಾರಾಯಣ
    ರೋಡ್​ ಶೋ ಝಲಕ್

    ಬಜರಂಗದಳ ನಿಷೇಧ ಮಾಡೋದಾಗಿ ಹೇಳಿರುವ ಕಾಂಗ್ರೆಸ್​ ಪಕ್ಷವನ್ನು ಮೊದಲು ಬ್ಯಾನ್​ ಮಾಡಬೇಕು. ಪಿಎಫ್‌ಐ ನಿಷೇಧ ಮಾಡಿ ಆಗಿದೆ ಬಂಧಿಸಿದ್ದವರನ್ನು ಬಿಡುಗಡೆ ಮಾಡಿದ್ದು ಕಾಂಗ್ರೆಸ್​ ಪಕ್ಷ ಅವರಿಗೆ ಹೇಳೋಕೆ ಏನೂ ಇಲ್ಲ ಎಂದು ಹರಿಹಾಯ್ದಿದ್ದಾರೆ.

    ಈ ಬಾರಿ ನಿರ್ಧಾರ ಬಹುಮತದ ಸರ್ಕಾರ ಆಗಲಿದೆ‌ ಬಿಜೆಪಿ ಸರ್ಕಾರ ಮೋದಿ ನೇತೃತ್ವದಲ್ಲಿ 150 ಸೀಟು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts