More

    ಆಕ್ರಮಿತ ಕಾಶ್ಮೀರವನ್ನು ಯಾವಾಗ ಖಾಲಿ ಮಾಡುತ್ತೀರಿ: ಪಾಕಿಸ್ತಾನಕ್ಕೆ ಜೈಶಂಕರ್ ಪ್ರಶ್ನೆ

    ಪಣಜಿ: ವಿಶ್ವದಲ್ಲಿ ಭಯೋತ್ಪಾದನೆ ದೊಡ್ಡ ಸವಾಲಾಗಿದೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುವುದು ದೊಡ್ಡ ಸವಾಲಾಗಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.

    ಗೋವಾದಲ್ಲಿ ನಡೆಯುತ್ತಿರುವ ಶಾಂಘೈ ಶೃಂಗ ಸಭೆ(SOC)ಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ.

    ಭಯೋತ್ಪಾದಕರ ಪಕ್ಕ ಕುಳಿತುಕೊಳ್ಳುವುದಿಲ್ಲ

    ಇನ್ನು ಸಭೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್​ ಭುಟ್ಟೋ ವಿರುದ್ಧ ತಮ್ಮ ದಾಳಿ ಮುಂದುವರೆಸಿದ ಜೈಶಂಕರ್​ ಭಯೋತ್ಪಾದಕ ಉದ್ಯಮದ ಪ್ರವರ್ತಕ, ಸಹವರ್ತಿ ಮತ್ತು ವಕ್ತಾರ ಎಂದು ಹರಿಹಾಯ್ದಿದ್ದಾರೆ.

    ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನ ವಿಶ್ವಾಸರ್ಹತೆ ಹಾಗೂ ವಿದೇಶಿ ವಿನಿಮಯ ಕಾಲಕ್ರಮೇಣ ಕ್ಷೀಣಿಸುತ್ತಿದೆ ಎಂದು ಸಹವರ್ತಿ ರಾಷ್ಟ್ರಗಳ ಮುಂದೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.

    ಇದನ್ನೂ ಓದಿ: ಚುನಾವಣಾ ಅಕ್ರಮ; ಭರ್ಜರಿ​ ಬೇಟೆಯಾಡಿದ ಐಟಿ ಅಧಿಕಾರಿಗಳು

    ಕಾಶ್ಮಿರ ನಮ್ಮದೇ

    ಇನ್ನು ಕಾಶ್ಮೀರ ಕುರಿತು ಪಾಕಿಸ್ತಾನದ ಜೊತೆ ಮಾತುಕತೆಗೆ ಪ್ರತಿಕ್ರಿಯಿಸಿದ ಜೈಶಂಕರ್​ ಸಂತ್ರಸ್ತರು ದುರ್ಷ್ಕಮಿಗಳ ಜೊತೆ ಕುಳಿತುಕೊಂಡು ಚರ್ಚಿಸುವುದಿಲ್ಲ.

    ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿ ಇರುತ್ತದೆ ಎಂದು ಕಣಿವೆ ರಾಜ್ಯದ ವಿಚಾರವಾಗಿ ಪಾಕಿಸ್ತಾನಕ್ಕೆ ಕೌಂಟರ್​ ಕೊಟ್ಟಿದ್ದಾರೆ.

    ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಜೊತೆ ಚರ್ಚಿಸಲು ಒಂದೇ ಒಂದು ವಿಷಯ ಬಾಕಿ ಇದೆ. ಅದೇನೆಂದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ತನ್ನ ಅಕ್ರಮ ಪ್ರವೇಶವನ್ನು ಯಾವಾಗ ಖಾಲಿ ಮಾಡುತ್ತದೆ ಅನ್ನೋದೊಂದೇ’ ಎಂದು ಜೈಶಂಕರ್‌ ಗುಡುಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts