ಬೆಂಗಳೂರು: ರಾಜ್ಯ ವಿಧಾನಸಭೆಯ ಚುನಾವಣೆಯ ಕಾವು ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಹೆಚ್ಚುತ್ತಿದ್ದು ರಾಜಕೀಯ ಪಕ್ಷಗಳ ನಾಯಕರ ಜಟಾಪಟಿಯ ಹೊರತು ಮತ್ತೊಂದು ವಿಚಾರಕ್ಕೆ ಕರ್ನಾಟಕ ಸದ್ದು ಮಾಡುತ್ತಿದೆ.
ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಇಲ್ಲಿಯವರೆಗೂ 100 ಕೋಟಿ ರೂಪಾಯಿಗೂ ಅಧಿಕ ಅಕ್ರಮ ಮೊತ್ತವನ್ನು ಆಯೋಗ ಮುಟ್ಟುಗೋಲು ಹಾಕಿಕೊಂಡಿದೆ.
ಹಲವೆಡೆ ದಾಳಿ
ಇನ್ನು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಹಣಕಾಸಿನ ನೆರವು ನೀಡಲು ದುಬಾರಿ ಮೊತ್ತದ ಹಣವನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಫೈನಾನ್ಶಿಯರ್ಗಳ ಮನೆ ಮೇಲೆ ಆದಾಯ ತೆರಿಗೆ(IT) ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಂಗಳೂರು ಹಾಗೂ ಮೈಸೂರಿನಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿದ್ದ ಹಾಗೂ ಲೆಕ್ಕ ಸಿಗದ ದುಬಾರಿ ಮೊತ್ತವನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಆತಂಕವಾದ, ಭ್ರಷ್ಟಾಚಾರಕ್ಕೆ ಪ್ರಾಮುಖ್ಯತೆ ನೀಡಿದೆ: ಪ್ರಧಾನಿ ಮೋದಿ ವಾಗ್ದಾಳಿ
ದುಬಾರಿ ಮೊತ್ತ
ಇನ್ನು ದಾಳಿಯ ವೇಳೆ ಅಧಿಕಾರಿಗಳಿಗೆ ಸುಮಾರು 15 ಕೋಟಿ ರೂಪಾಯಿ ನಗದು ಹಾಗೂ 5 ಕೋಟಿ ರೂ ಮೌಲ್ಯದ ಚಿನ್ನಾಭರಣ ದೊರೆತ್ತಿದೆ. ದಾಳಿಯ ವೇಳೆ ದೊರೆತ ನಗದು ಹಾಗೂ ಚಿನ್ನಾಭರಣದ ಕುರಿತು ಯಾವುದೇ ಸೂಕ್ತ ದಾಖಲೆಗಳು ದೊರೆಯದ ಕಾರಣ ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಂತಿ ನಗರ, ಕಾಕ್ಸ್ ಟೌನ್, ಶಿವಾಜಿ ನಗರ, ಆರ್ಎಂವಿಎಕ್ಸ್ಟೆನ್ಷನ್, ಕನ್ನಿಂಗ್‌ಹ್ಯಾಮ್ ರಸ್ತೆ, ಸದಾಶಿವ ನಗರ, ಕುಮಾರಪಾರ್ಕ್ ಪಶ್ಚಿಮ ಮತ್ತು ಫೇರ್‌ಫೀಲ್ಡ್ ಲೇಔಟ್ ಸೇರಿದಂತೆ ಬೆಂಗಳೂರು ಹಾಗೂ ಮೈಸೂರಿನ ಹಲವೆಡೆ ದಾಳಿ ಮಾಡಿದ್ದಾರೆ.