ಪ್ಯಾಂಗಾಂಗ್​ ತ್ಸೊ ಮತ್ತು ಗೋಗ್ರಾ ಪೋಸ್ಟ್​ ನಮ್ಮದು, ಇಲ್ಲಿಂದ ಹಿಂದೆ ಸರಿಯಲ್ಲ ಎನ್ನುತ್ತಿದೆ ಚೀನಾ

pangong tso lake
Published on

ನವದೆಹಲಿ: ಲಡಾಖ್​ನ ಪೂರ್ವಭಾಗದಲ್ಲಿ ವಾಸ್ತವ ಗಡಿರೇಖೆಯಿಂದ ಸೇನೆಯನ್ನು ಹಿಂತೆಗೆದುಕೊಳ್ಳುವ ವಿಷಯವಾಗಿ ಭಾರತ ಮತ್ತು ಚೀನಾ ನಡುವೆ ಮಾತುಕತೆ ನಡೆಯುತ್ತಲೇ ಇದೆ. ಈ ಪ್ರದೇಶದಲ್ಲಿನ ಹಾಟ್​ಸ್ಪ್ರಿಂಗ್​ನಿಂದ ಚೀನಾ ಹಿಂದೆ ಸರಿದಿದೆ. ಆದರೆ ಪ್ಯಾಂಗಾಂಗ್​ ತ್ಸೊ ಮತ್ತು ಗೋಗ್ರಾ ಪೋಸ್ಟ್​ನಿಂದ ಹಿಂದೆ ಸರಿಯಲು ನಿರಾಕರಿಸುತ್ತಿದೆ.

ವ್ಯೂಹಾತ್ಮಕವಾಗಿ ಪ್ಯಾಂಗಾಂಗ್​ ತ್ಸೊ ಸರೋವರದ ಪ್ರದೇಶ ಮತ್ತು ಗೋಗ್ರಾ ಪೋಸ್ಟ್​ ತುಂಬಾ ಮುಖ್ಯವಾಗಿದೆ. ಅದೆಷ್ಟೇ ಹೇಳಿದರೂ ಚೀನಾ ಮಾತ್ರ ಈ ಎರಡು ಪ್ರದೇಶಗಳಿಂದ ಹಿಂದೆ ಸರಿಯಲು ನಿರಾಕರಿಸುತ್ತಲೇ ಇದೆ. ಈ ಎರಡು ಪ್ರದೇಶಗಳ ಮೇಲೆ ಹಕ್ಕು ಸ್ವಾಮ್ಯ ಸ್ಥಾಪಿಸಲು ಚೀನಾ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ಪೂರ್ವ ಲಡಾಖ್​ನಲ್ಲಿ ಭಾರತ ಮತ್ತು ಚೀನಾ ನಡುವೆ ಮೇನಿಂದ ತೀವ್ರ ಜಟಾಪಟಿ ಏರ್ಪಟ್ಟಿದೆ. ಈ ಜಟಾಪಟಿಯನ್ನು ಇತ್ಯರ್ಥ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿವೆ.

ಜೂ.15ರಂದು ಚೀನಾ ಯೋಧರು ಮುಳ್ಳುತಂತಿ ಸುತ್ತಿದ ಬಡಿಗೆ ಮತ್ತು ಕಬ್ಬಿಣದ ರಾಡ್​ಗಳಿಂದ ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಿತ್ತು. ಈ ಘಟನೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಇದಾದ ನಂತರದಲ್ಲಿ ಈ ಪ್ರದೇಶದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net