

ಪಾಕಿಸ್ತಾನ: ಆತ್ಮಾಹುತಿ ಬಾಂಬ್ ಸ್ಫೋಟಕ್ಕೆ ಪಾಕಿಸ್ತಾನದಲ್ಲಿ 20ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಸುಮಾರು 150 ಮಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನದ ಬಜೌರ್ ಜಿಲ್ಲೆಯ ಖರ್ ಎಂಬಲ್ಲಿ ಜಮಿಯತ್ ಉಲೆಮಾ ಇ ಇಸ್ಲಾಂ ಕಾರ್ಯಕರ್ತರ ಸಮಾವೇಶದಲ್ಲಿ ಈ ಬಾಂಬ್ ಸ್ಫೋಟಗೊಂಡಿದೆ.
ಆತ್ಮಾಹುತಿ ದಳದಿಂದ ಈ ಬಾಂಬ್ ಸ್ಫೋಟಿಸಲಾಗಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ 20ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಈ ಸ್ಫೋಟ ಪಾಕ್ ಜನತೆಯನ್ನು ತಲ್ಲಣಗೊಳಿಸಿದ್ದು, ತುರ್ತು ಕಾರ್ಯಾಚರಣೆ ಹಾಗೂ ಆ್ಯಂಬುಲೆನ್ಸ್ಗಳು ತರಾತುರಿಯಲ್ಲಿ ಓಡಾಡುತ್ತಿರುವ ದೃಶ್ಯಗಳ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.
ಬಂದೋಬಸ್ತ್, ಭದ್ರತೆ ಜತೆಗೆ ತನಿಖೆ ಆರಂಭಗೊಂಡಿದ್ದು, ಪ್ರಕರಣದ ಕುರಿತಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಸಾವು-ನೋವಿನ ಕುರಿತ ನಿಖರವಾದ ಅಂಕಿ-ಅಂಶ ಕೂಡ ಇನ್ನಷ್ಟೇ ಸಿಗಬೇಕಿದೆ. - ಏಜೆನ್ಸೀಸ್