ಹೊಲದಲ್ಲಿ ದಿಢೀರ್​ ಪ್ರತ್ಯಕ್ಷವಾದ 'ಐ ಲವ್​​ ಪಾಕಿಸ್ತಾನ್​' ಎಂಬ ಬಲೂನು, ಪಾಕಿಸ್ತಾನಿ ಧ್ವಜ!

balloons
Published on

ಚಂಡೀಗಡ: ಭಾರತವು ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪಂಜಾಬಿನ ಹೊಲವೊಂದರಲ್ಲಿ ಪಾಕಿಸ್ತಾನದ ಬಾವುಟಗಳು ಮತ್ತು ಐ ಲವ್​ ಪಾಕಿಸ್ತಾನ್​ ಎಂಬ ಬರಹ-ಚಿತ್ರಗಳುಳ್ಳ ಬಲೂನುಗಳು ಸಿಕ್ಕಿವೆ. ಇಂದು ಮಧ್ಯಾಹ್ನ ದಿಢೀರನೇ ಪ್ರತ್ಯಕ್ಷವಾದ ಈ ಬಲೂನುಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪಂಜಾಬಿನ ರೂಪನಗರ ಜಿಲ್ಲೆಯ ಸಾಂಡೋಯ ಗ್ರಾಮದಲ್ಲಿ ಈ ಪ್ರಸಂಗ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. "ಬಲೂನುಗಳು ಹತ್ತಿರದ ಜಾಗದಿಂದ ಹಾರಿಕೊಂಡು ಬಂದಿರುವ ಹಾಗಿದೆ. ಎಲ್ಲಾ ಆ್ಯಂಗಲ್​ಗಳಲ್ಲೂ ತನಿಖೆ ನಡೆಸುತ್ತಿದ್ದೇವೆ" ಎಂದು ರೂಪ್​ನಗರದ ಎಸ್​​ಎಸ್ಪಿ ಅಖಿಲ್ ಚೌಧರಿ ಹೇಳಿದ್ದಾರೆ.

ನಿನ್ನೆಯ ದಿನ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಭಂಗ್​ಲೇದಾ ಗ್ರಾಮದಲ್ಲಿ ಕೂಡ ಈ ರೀತಿಯ ಬಲೂನುಗಳು ಸಿಕ್ಕಿದ್ದವು ಎಂದು ವರದಿಯಾಗಿತ್ತು. ನಿವಾಸಿಯೊಬ್ಬನ ಮನೆಯಂಗಳದಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದ ಬಲೂನುಗಳ ಬಗ್ಗೆ ಪಂಚಾಯಿತಿ ಪ್ರಧಾನರಿಗೆ ತಿಳಿಸಲಾಯಿತು. ದೂರು ನೀಡಲಾಗಿ, ಬಲೂನುಗಳನ್ನು ವಶಕ್ಕೆ ತೆಗೆದುಕೊಂಡ ಮಂಡಿ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net