More

    ಜಾಕ್​​ಲೀನ್ ಫರ್ನಾಂಡಿಸ್​​, ಸಚಿನ್ ತೆಂಡೂಲ್ಕರ್…. ಸೆಲೆಬ್ರಿಟಿಗಳ ಸ್ವಾತಂತ್ರ್ಯ ದಿನಾಚರಣೆಯ ಝಲಕ್​ ಇಲ್ಲಿದೆ

    ಮುಂಬೈ: ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಇಂದು ಹಲವು ಸೆಲೆಬ್ರಿಟಿಗಳು ತಮ್ಮದೇ ಶೈಲಿಯಲ್ಲಿ ಈ ದಿನವನ್ನು ಆಚರಿಸಿದ್ದಾರೆ, ಶುಭಾಶಯ ಕೋರಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿರುವ ಕೆಲವು ವಿಶಿಷ್ಟ ಸಂದೇಶ ಮತ್ತು ಚಿತ್ರಗಳು ಇಲ್ಲಿವೆ.

     

    View this post on Instagram

     

    A post shared by Sidharth Malhotra (@sidmalhotra)

    ಕಾರ್ಗಿಲ್​ ಯುದ್ಧದಲ್ಲಿ ಅಮರನಾದ ವೀರ ಸೇನಾನಿ ಕ್ಯಾಪ್ಟನ್​ ವಿಕ್ರಮ್​ ಬತ್ರ ಅವರ ಮೇಲೆ ಚಿತ್ರಿತವಾದ ‘ಶೇರ್​ಷಾ’ ಹಿಂದಿ ಚಿತ್ರದ ನಾಯಕ ನಟ ಸಿದ್ಧಾರ್ಥ್​​ ಮಲ್ಹೋತ್ರ, ಆ ಚಿತ್ರದ್ದೇ ಒಂದು ಡೈಲಾಗ್​ ಹಾಕಿ ಶುಭಾಶಯ ಕೋರಿದ್ದಾರೆ. ಇಂಡಿಯಾ ಗೇಟ್​ನ ಮುಂದೆ ರಾಷ್ಟ್ರಧ್ವಜವನ್ನು ಹಿಡಿದಿರುವ ತಮ್ಮ ಚಿತ್ರವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

    ನಟಿ ಜಾಕ್​ಲೀನ್​ ಫರ್ನಾಂಡಿಸ್​, ಭಾರತೀಯ ಪಾರಂಪರಿಕ ಉಡುಗೆಯನ್ನು ತೊಟ್ಟು ಪೋಸ್​ ನೀಡಿದ್ದಾರೆ. ಬಿಳಿಯ ಬಣ್ಣದ ಸೀರೆಗೆ ಹಸಿರು ಬಣ್ಣದ ಒಡವೆಗಳನ್ನು ತೊಟ್ಟಿರುವ ಸುಂದರ ಚಿತ್ರಗಳನ್ನು ರಾಷ್ಟ್ರಧ್ವಜದ ಎಮೋಜಿಗಳೊಂದಿಗೆ ಟ್ವೀಟ್​ ಮಾಡಿದ್ದಾರೆ.

    ಬಾಲಿವುಡ್ ನಟ ಅಜಯ್​ ದೇವಗನ್​ ಹಿನ್ನೆಲೆಯಲ್ಲಿ ಬಾವುಟವುಳ್ಳ ತಮ್ಮ ಚಿತ್ರವನ್ನು ಶೇರ್​ ಮಾಡಿ ಶುಭಾಶಯ ಕೋರಿದ್ದಾರೆ. “ಭಾರತೀಯ ಧ್ವಜವನ್ನು ನೋಡಿದರೆ ಒಂದು ಭಾವನೆ ಪ್ರಬಲವಾಗುತ್ತದೆ – ಅದು ಕೃತಜ್ಞತೆ. ಬಾವುಟವನ್ನು ಎತ್ತರಕ್ಕೆ ಹಾರುತ್ತಿರುವಂತೆ ನೋಡಿಕೊಳ್ಳುತ್ತಿರುವ ನಮ್ಮ ರಕ್ಷಣಾ ಪಡೆಗಳಿಗೆ ಕೃತಜ್ಞತೆ” ಎಂದಿದ್ದಾರೆ.

    ಅಜಯ್​ ಪತ್ನಿ, ನಟಿ ಕಾಜೋಲ್​ ಧ್ವಜದ ಮೂರೂ ಬಣ್ಣಗಳ ವಸ್ತ್ರಗಳನ್ನು ತೊಟ್ಟಿರುವ ತಮ್ಮ ಚಿತ್ರಗಳೊಂದಿಗೆ ಹಿನ್ನೆಲೆಯಲ್ಲಿ “ಜಯ ಜಯ ಜಯ ಜಯ ಹೇ” ಹಾಡಿದ್ದಾರೆ.

    ಗಾಯಕಿ ನೇಹಾ ಕಕ್ಕರ್​ ಬಿಳಿಯ ಸಲ್ವಾರ್​ ತೊಟ್ಟು, ಬಾವುಟವನ್ನು ಕೈಯಲ್ಲಿ ಹಿಡಿದಿರುವ ತಮ್ಮ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

    ಕ್ರಿಕೆಟ್​ ಹೀರೋ ಸಚಿನ್ ತೆಂಡೂಲ್ಕರ್​ ಅವರು, “ಭಾರತ್​​ ಹಮೇಶಾ ಸರ್​ ಆಂಖೋ ಪರ್​” ಎಂದು ಟ್ವೀಟ್​​ ಮಾಡಿದ್ದಾರೆ. “ನಾನು ಮೈದಾನಕ್ಕೆ ಏಕೆ ಇಳಿದಿದ್ದೇನೆ ಎಂಬುದನ್ನು ನೆನಪಿಟ್ಟುಕೊಳ್ಳಲು ಯಾವಾಗಲೂ ನನ್ನ ಹೆಲ್ಮೆಟ್​ ಮೇಲೆ ಬಾವುಟವನ್ನು ಹೆಮ್ಮೆಯಿಂದ ಧರಿಸಿದ್ದೇನೆ. ವಿಶ್ವದೆಲ್ಲೆಡೆಯ ಭಾರತೀಯರಿಗೆ 75ನೇ ಸ್ವಾತಂತ್ರ್ಯದಿನದ ಶುಭಾಶಯಗಳು. ಜೈಹಿಂದ್​” ಎಂದು ತಮ್ಮ ಹೆಲ್ಮೆಟ್​ ಮೇಲೆ ಬಾವುಟ ಕಾಣುವ ಚಿತ್ರವನ್ನು ಟ್ವೀಟ್​ ಮಾಡಿದ್ದಾರೆ.

    ಮತ್ತೊಬ್ಬ ಕ್ರಿಕೆಟಿಗ ಯುವರಾಜ್​ ಸಿಂಗ್​ ಭಾರತ ತಂಡದ ವಿಜಯದ ಕ್ಷಣದ ತಮ್ಮ ಚಿತ್ರವನ್ನು ಪೋಸ್ಟ್​ ಮಾಡಿ, “ಸ್ವಾತಂತ್ರ್ಯ ಬೆಲೆಬಾಳುವಂಥದ್ದು. ಅದನ್ನು ಗೌರವಿಸೋಣ, ಜವಾಬ್ದಾರಿಯಿಂದ ಅನುಭವಿಸೋಣ” ಎಂದಿದ್ದಾರೆ.

    ವೀರೇಂದ್ರ ಸೆಹವಾಗ್​ ಕೂಡ ತ್ರಿವರ್ಣದೊಂದಿಗೆ ತಮ್ಮ ಚಿತ್ರವನ್ನು ಪೋಸ್ಟ್​ ಮಾಡಿ, “ನಾವು ಹಿಂದೂಸ್ತಾನಿ ಎಂಬುದೇ ನಮ್ಮ ನಿಜವಾದ ಗುರುತು” ಎಂದು ಕಾವ್ಯಮಯವಾಗಿ ಬರೆದಿದ್ದಾರೆ.

    ಸೈನಿಕ ಶಾಲೆಗಳಲ್ಲಿ ಇನ್ನು ಮುಂದೆ ಹೆಣ್ಣುಮಕ್ಕಳಿಗೂ ಪ್ರವೇಶಾವಕಾಶ

    ಅಂತರಿಕ್ಷಕ್ಕೆ ಮಾನವಯಾನ ನಡೆಸುವ 4ನೇ ರಾಷ್ಟ್ರವಾಗಲಿದೆ, ಭಾರತ : ರಾಷ್ಟ್ರಪತಿ ಕೋವಿಂದ್​

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts