ಓಲಾ ಎಲೆಕ್ಟ್ರಿಕ್​ ಸ್ಕೂಟರ್ ಅನಾವರಣ; ಬೆಲೆ, ಲಭ್ಯತೆ ವಿವರ ಇಲ್ಲಿದೆ

ola
Published on

ನವದೆಹಲಿ: ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭಕ್ಕೆ ಓಲಾ ಕಂಪೆನಿ ತನ್ನ ಎಲೆಕ್ಟ್ರಿಕ್​ ಸ್ಕೂಟರ್​​ಅನ್ನು ಅನಾವರಣಗೊಳಿಸಿದೆ. ಎಸ್​1 ಮತ್ತು ಎಸ್​1 ಪ್ರೋ ಟ್ರಿಂ ಎಂಬ ಎರಡು ಮಾದರಿಯ ಸ್ಕೂಟರ್​ಗಳನ್ನು ಲಾಂಚ್​ ಮಾಡಿರುವ ಓಲಾ, ಇಂದು ಎಸ್​1 ಮಾದರಿಯ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿದೆ.

ಒಮ್ಮೆ ಚಾರ್ಜ್​ ಮಾಡಿದರೆ 181 ಕಿಲೋಮೀಟರ್​ಗಳಷ್ಟು ದೂರ ಕ್ರಮಿಸಬಲ್ಲ ಓಲಾ ಎಸ್​​1 ಸ್ಕೂಟರ್,​ ಗಂಟೆಗೆ 115 ಕಿಲೋಮೀಟರ್​​ನಷ್ಟು ವೇಗವಾಗಿ ಚಲಿಸಬಹುದಾಗಿದೆ. ಬೇಸಿಕ್​ ಮಾಡೆಲ್​ ಆದ ಎಸ್​1 ಮಾದರಿಗೆ 99,999 ರೂ. ಬೆಲೆಯಾದರೆ, ಮತ್ತಷ್ಟು ವಿಶೇಷತೆಗಳನ್ನುಳ್ಳ ಎಸ್​1 ಪ್ರೋ ಟ್ರಿಂಗೆ 1,29,999 ರೂ. ಎಕ್ಸ್-​ಶೋರೂಂ ಬೆಲೆ ಎನ್ನಲಾಗಿದೆ.

ಕಳೆದ ತಿಂಗಳು ಕೇವಲ 499 ರೂ.ಗಳನ್ನು ಕಟ್ಟಿ ಓಲಾ ಸ್ಕೂಟರನ್ನು ಕಾದಿರಿಸಲು ಓಲಾ ಕಂಪೆನಿ ಅನುವು ಮಾಡಿಕೊಟ್ಟಿತ್ತು. ಇದರಿಂದಾಗಿ ಒಂದೇ ದಿನದಲ್ಲಿ 1 ಲಕ್ಷ ಬುಕಿಂಗ್​ಗಳು ಲಭಿಸಿದ್ದವು. ಹಲವು ಬಣ್ಣಗಳಲ್ಲಿ ಲಭ್ಯವಾಗಲಿರುವ ಓಲಾ ಎಲೆಕ್ಟ್ರಿಕ್​ ಸ್ಕೂಟರನ್ನು ಮುಂಬರುವ ಸೆಪ್ಟೆಂಬರ್​ 8 ರಿಂದ ಗ್ರಾಹಕರು ಖರೀದಿಸಬಹುದು. ಅಕ್ಟೋಬರ್​ ತಿಂಗಳಿಂದ ಸ್ಕೂಟರನ್ನು ನೇರವಾಗಿ ಫ್ಯಾಕ್ಟರಿಯಿಂದ ಡೆಲಿವರಿ ಮಾಡಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net