ನಿಮಗೊಂದು ಸವಾಲು; ಸಾಧ್ಯವಾದ್ರೆ 8 ಸೆಕೆಂಡುಗಳಲ್ಲಿ ಕೋಣೆಯಲ್ಲಿ ಅಡಗಿರುವ ಬೆಕ್ಕನ್ನು ಪತ್ತೆ ಮಾಡಿ…

Optical Illusion
Published on

ಬೆಂಗಳೂರು: ದೃಷ್ಟಿ ಭ್ರಮೆಗಳು ನಮ್ಮ ಗ್ರಹಿಕೆ ಹಾಗೂ ವಾಸ್ತವಕ್ಕಿಂತ ಭಿನ್ನವಾದಾಗ ದೃಷ್ಟಿಕೋನದ ಕುರಿತಾಗಿ ಇರುವ ವ್ಯತ್ಯಾಸವನ್ನು ತಿಳಿಸುತ್ತದೆ.  ಕೆಲವೊಮ್ಮೆ ಮೊದಲ ನೋಟದಲ್ಲಿ ವಸ್ತುವು ನಮ್ಮ ಕಣ್ಣುಗಳ ಮುಂದೆ ಇರುತ್ತದೆ ಆದರೆ ನಾವು ಅದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಇಂತಹ ಸವಾಲು ಇಂದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗುತ್ತವೆ.

ದೃಷ್ಟಿ ಭ್ರಮೆ ಎಂದರೇನು?: ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

Optical Illusion

8 ಸೆಕೆಂಡುಗಳಲ್ಲಿ ಬೆಕ್ಕನ್ನು ಹುಡುಕಿ: ಇಲ್ಲಿ ಹಂಚಿಕೊಂಡಿರುವ ಚಿತ್ರವು ಅಸ್ತವ್ಯಸ್ತವಾಗಿರುವ ಕೋಣೆಯ ದೃಶ್ಯವನ್ನು ತೋರಿಸುತ್ತದೆ. ಇಲ್ಲಿರುವ ವಸ್ತುಗಳ ಮಧ್ಯೆ ಮುದ್ದಾದ ಬೆಕ್ಕಿನ ಮರಿಯೊಂದು ಅಡಗಿಕೊಂಡು ಕುಳಿತಿದೆ. 8 ಸೆಕೆಂಡುಗಳಲ್ಲಿ ಬೆಕ್ಕನ್ನು ಗುರುತಿಸುವುದೇ ನಾವು ಇಂದು ನಿಮಗೆ ನೀಡುತ್ತೀರುವ ಸವಾಲಾಗಿದೆ.

Optical Illusion

ನಿಮ್ಮ ಸಮಯ ಈಗ ಪ್ರಾರಂಭವಾಗುತ್ತದೆ. ಇದು ನಿಮ್ಮ ವೀಕ್ಷಣಾ ಕೌಶಲ್ಯದ ಸರಳ ಪರೀಕ್ಷೆಯಾಗಿದೆ. ನಿಮಗಾಗಿ ಒಂದು ಸಹಾಯ ಮಾಡುತ್ತೇವೆ. ಉತ್ತರ ಸಿಕ್ಕಿದ್ದರೆ ಅಭಿನಂದನೆ. ನಿಮಗೆ ಬೆಕ್ಕಿನ ಮರಿಯನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಇದ್ದರೆ, ಬನ್ನಿ ನಾವು ನಮಗೆ ಸಹಾಯ ಮಾಡುತ್ತೇವೆ. ಈ ಕೆಳಗಿನ ಫೋಟೋದಲ್ಲಿ ಉತ್ತರವಿದೆ. ಚಿತ್ರದ ಬಲಭಾಗದಲ್ಲಿರುವ ದೊಡ್ಡ ಕಾಗದದ ಬಂಡಲ್ ಅಡಿಯಲ್ಲಿ ಬೆಕ್ಕು ಅಡಗಿಕೊಂಡಿರುವುದು ಕಂಡುಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net