

| ವೀರೇಂದ್ರ ಷಡಕ್ಷರಿ ವ್ಯವಸ್ಥಾಪಕ ನಿರ್ದೇಶಕ, ರಮಣಶ್ರೀ ಗ್ರೂಪ್
ಎಲ್ಲ ಉದ್ಯಮಗಳ ಪೈಕಿ ಹೋಟೆಲ್ ಉದ್ಯಮ ಅತಿ ಉತ್ತಮವಾದುದಾಗಿದೆ. ವಸ್ತುಗಳ ಉತ್ಪಾದನೆ ಮಾಡುವ ವ್ಯಕ್ತಿ ಮತ್ತು ಅನುಭೋಗಿಸುವ ಗ್ರಾಹಕರ ನಡುವೆ ನೇರ ಸಂಪರ್ಕವಿರುತ್ತದೆ. ಜತೆಗೆ, ರುಚಿಕರ ಮತ್ತು ಗುಣಮಟ್ಟದ ಆಹಾರ ತಯಾರಿಸಿಕೊಟ್ಟಲ್ಲಿ ಉತ್ತಮ ಬಾಂಧವ್ಯವೂ ಬೆಳೆಯುತ್ತದೆ. ಉತ್ಪಾದನೆಯ ಗುಣಮಟ್ಟದ ಬಗ್ಗೆ ತಕ್ಷಣ ಪ್ರತಿಕ್ರಿಯೆ ಸಿಗುತ್ತದೆ. ತಪ್ಪಾಗಿದ್ದರೆ ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ಕರೊನಾ ಲಾಕ್ಡೌನ್ ವೇಳೆ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಜನ ಕೂಡ ಮನೆಯಲ್ಲೇ ಇದ್ದೂಇದ್ದೂ ರೋಸಿ ಹೋಗಿದ್ದಾರೆ. ಈಗ ರಿವೆಂಜ್ ಟೂರಿಸಂ ಮಾದರಿಯಲ್ಲಿ ದೇಶಾದ್ಯಂತ ಜನರ ಪ್ರವಾಸ ಮತ್ತು ಪರ್ಯಟನೆ ಆರಂಭವಾಗಲಿದೆ. ಪ್ರಸ್ತುತ ಕರೊನಾ ಸೋಂಕು ಇಳಿಕೆಯಾದ ನಂತರ ಹೋಟೆಲ್ ಉದ್ಯಮಕ್ಕೆ ಭಾರಿ ಬೇಡಿಕೆ ಬರುತ್ತದೆ. ಹೀಗಾಗಿ, ಸೇವಾ ವಲಯವಾದ ಹೋಟೆಲ್ ಉದ್ಯಮವನ್ನು ಆರಂಭಿಸಲು ಇದು ಸುಸಂದರ್ಭವಾಗಿದೆ. ಹೋಟೆಲ್ ಉದ್ಯಮಕ್ಕೆ ಹೊಸಬರು ಬರಲು ಸೂಕ್ತ ಸಮಯ, ಎಲ್ಲ ಋತುಮಾನದಲ್ಲಿ ಉದ್ಯೋಗ ಮತ್ತು ಕುಟುಂಬ ಪದ್ಧತಿ ಜೀವಂತ ಇರುವವರೆಗೂ ಹೋಟೆಲ್ ಉದ್ಯಮಕ್ಕೆ ನಷ್ಟ ಆಗುವುದಿಲ್ಲ.