More

    ಇದು ವಾಟ್ಸ್​ಆ್ಯಪ್​ ಅಡ್ಮಿನ್ಸ್​ ಓದಲೇಬೇಕಾದ ವಿಚಾರ; ಗ್ರೂಪ್​ ಸದಸ್ಯರ ಪೋಸ್ಟ್​ಗಳಿಗೆ ಸಂಬಂಧಿಸಿದಂತೆ ಮತ್ತದೇ ಆದೇಶ ಪುನರುಚ್ಚಾರ..

    ನವದೆಹಲಿ: ವಾಟ್ಸ್​ಆ್ಯಪ್​ ಗ್ರೂಪ್​ ಅಡ್ಮಿನ್​ಗಳಾದವರು ಎಷ್ಟೋ ಸಲ ‘ಅಡ್ಮಿನ್​ ಓನ್ಲಿ’ ಎಂಬ ಆಪ್ಷನ್​ ಆ್ಯಕ್ಟಿವೇಟ್ ಮಾಡಿಟ್ಟುಕೊಂಡಿರುತ್ತಾರೆ. ಗ್ರೂಪ್​ ಸದಸ್ಯರೆಲ್ಲರೂ ಬೇಕಾಬಿಟ್ಟಿ ಮೆಸೇಜ್ ಮಾಡಬಾರದು ಎಂಬ ಉದ್ದೇಶದಿಂದ ಹೀಗೆ ಮಾಡಿಟ್ಟುಕೊಂಡಿರುತ್ತಾರೆ. ಗ್ರೂಪ್​ ಸದಸ್ಯರಲ್ಲಿ ಯಾರಾದರೂ ಆಕ್ಷೇಪಾರ್ಹ ಪೋಸ್ಟ್ ಹಾಕಿ ಕೇಸ್​ ಆದಲ್ಲಿ ಅಡ್ಮಿನ್​ ಮೇಲೂ ಕ್ರಮಕೈಗೊಳ್ಳಲಾಗುತ್ತದೆ ಎಂಬ ಭಯವೇ ಇದಕ್ಕೆ ಕಾರಣ.

    ಆದರೆ ಈಗ ವಾಟ್ಸ್​ಆ್ಯಪ್​ ಅಡ್ಮಿನ್​​ಗಳು ಅಂಥದ್ದೆಲ್ಲ ಮಾಡಿಕೊಳ್ಳುವ ಅನಿವಾರ್ಯತೆ ಇಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಇರುವ ಮಹತ್ವದ ತೀರ್ಪೋಂದನ್ನು ಮದ್ರಾಸ್ ಹೈಕೋರ್ಟ್​ ಪುನರುಚ್ಚರಿಸಿದ್ದು, ವಾಟ್ಸ್​ಆ್ಯಪ್​ ಅಡ್ಮಿನ್​ಗಳಾಗಿರುವವರು ಇದರಿಂದ ನಿರಾಳರಾಗುವುದಂತೂ ಖಚಿತ. ಗ್ರೂಪ್​ ಸದಸ್ಯರ ಪೋಸ್ಟ್​ಗಳಿಗೆ ವಾಟ್ಸ್​ಆ್ಯಪ್​ ಅಡ್ಮಿನ್ ಹೊಣೆಗಾರರಲ್ಲ ಎಂಬ ಆದೇಶವನ್ನು ಮದ್ರಾಸ್ ಹೈಕೋರ್ಟ್ ಪುನರುಚ್ಚರಿಸಿದೆ. ಬಾಂಬೆ ಹೈಕೋರ್ಟ್​ ಈ ಹಿಂದೆ ನೀಡಿದ್ದ ಆದೇಶವೊಂದನ್ನು ಉಲ್ಲೇಖಿಸುವ ಮೂಲಕ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಆ ಆದೇಶವನ್ನು ಪುನರುಚ್ಚರಿಸಿದ್ದಾರೆ.

    ಇದನ್ನೂ ಓದಿ: ನಿರ್ಮಾಣ ಹಂತದ ಮನೆ-ಕಟ್ಟಡಗಳೇ ಇವರ ಟಾರ್ಗೆಟ್; ಇವರು ಕದಿಯುತ್ತಿದ್ದುದೇ ಬೇರೆ..

    ಬಾಂಬೆ ಹೈಕೋರ್ಟ್​​ ವಿ.ಕಿಶೋರ್ ಮತ್ತು ಮಹಾರಾಷ್ಟ್ರ ರಾಜ್ಯ ನಡುವಿನ ಪ್ರಕರಣದಲ್ಲಿ ಆಕ್ಷೇಪಾರ್ಹ ಪೋಸ್ಟ್​ಗೆ ಸಂಬಂಧಿಸಿದ ಆರೋಪಿಗಳ ಪಟ್ಟಿಯಿಂದ ವಾಟ್ಸ್​ಆ್ಯಪ್ ಅಡ್ಮಿನ್ ಹೆಸರನ್ನು ತೆಗೆದುಹಾಕಬೇಕು ಎಂದು ಹೇಳಿತ್ತು. ಅಡ್ಮಿನ್ ಆದ ಮಾತ್ರಕ್ಕೆ ಆ ವ್ಯಕ್ತಿಯನ್ನು ಆರೋಪಿ ಸ್ಥಾನದಲ್ಲಿ ಇರಿಸಲಾಗದು. ಆದರೆ ಅಡ್ಮಿನ್​ ಜವಾಬ್ದಾರಿ ಹೊರತಾಗಿಯೂ ಆತ ಅಥವಾ ಆಕೆ ಆಕ್ಷೇಪಾರ್ಹ ಪೋಸ್ಟ್​ ವಿಚಾರದಲ್ಲಿ ಪಾಲ್ಗೊಂಡಿದ್ದರೆ ಮಾತ್ರ ಆಗ ಆರೋಪಿಯನ್ನಾಗಿಸಬಹುದು ಎಂದಿದೆ.

    ಇದನ್ನೂ ಓದಿ: ‘ಶಾಸಕ ಪೊಲೀಸರ ಪ್ಯಾಂಟ್ ಒದ್ದೆಯಾಗಿಸಬಲ್ಲ’: ಹೀಗಂದ ರಾಜಕಾರಣಿ ವಿರುದ್ಧ ಜಾರಿಯಾಯಿತು ಮಾನನಷ್ಟ ನೋಟಿಸ್​

    ಅಡ್ಮಿನ್ ಪಾತ್ರ ಅಡ್ಮಿನ್​ ಅಷ್ಟೇ ಆಗಿದ್ದರೆ, ವಿವಾದಿತ ಅಥವಾ ಆಕ್ಷೇಪಾರ್ಹ ಪೋಸ್ಟ್​ನಲ್ಲಿ ಅಡ್ಮಿನ್​ ಬೇರೆ ಇನ್ಯಾವ ರೀತಿಯಲ್ಲೂ ತೊಡಗಿಕೊಂಡಿರದಿದ್ದರೆ ಅಡ್ಮಿನ್​ ಹೆಸರನ್ನು ದೋಷಾರೋಪ ಪಟ್ಟಿಯಿಂದ ತೆಗೆದುಹಾಕಬಹುದು ಎಂದು ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಆದೇಶ ನೀಡಿದ್ದಾರೆ. –ಏಜೆನ್ಸೀಸ್

    ಹೆಂಡತಿಯೊಂದಿಗೆ ಜಗಳವಾಡಿದ ಡಾಕ್ಟರ್​ ಸಾವು; ಬೆಡ್​ರೂಮ್​ನಲ್ಲಿ ಹೊತ್ತಿ ಉರಿದ ಬೆಂಕಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts