ಹೆಂಡತಿಯೊಂದಿಗೆ ಜಗಳವಾಡಿದ ಡಾಕ್ಟರ್​ ಸಾವು; ಬೆಡ್​ರೂಮ್​ನಲ್ಲಿ ಹೊತ್ತಿ ಉರಿದ ಬೆಂಕಿ..!

Doctor
Published on

ವಿಜಯಪುರ: ಪತ್ನಿಯೊಂದಿಗೆ ಜಗಳವಾಡಿಕೊಂಡಿದ್ದ ವೈದ್ಯರೊಬ್ಬರ ಬೆಡ್​ ರೂಮ್​ಗೆ ಬೆಂಕಿ ಹೊತ್ತಿಕೊಂಡಿದ್ದು, ಅವರು ಬೆಂಕಿಗಾಹುತಿಯಾಗಿ ಸಾವಿಗೀಡಾಗಿದ್ದಾರೆ. ವಿಜಯಪುರದ ಬಂಜಾರಾ ಕ್ರಾಸ್​ ಬಳಿ ಇಂಥದ್ದೊಂದು ದುರಂತ ಸಂಭವಿಸಿದೆ. ಡಾ.ರಮೇಶ್​ ಗೌಡ ಬಿರಾದಾರ ಎಂಬವರು ಸಾವಿಗೀಡಾಗಿದ್ದಾರೆ.

ಡಾ. ರಮೇಶ ಗೌಡ ಬಿರಾದಾರ ಪ್ಯಾರಾಮೆಡಿಕಲ್ ಕಾಲೇಜಿನ ಅಧ್ಯಕ್ಷರಾಗಿದ್ದು, ಬಿಎಎಂಎಸ್​ ಡಿಇಎಂ ಕೋರ್ಸ್ ಮಾಡಿದ್ದ ಇವರು ಧನ್ವಂತರಿ ಎಂಬ ಕ್ಲಿನಿಕ್ ಕೂಡ ನಡೆಸುತ್ತಿದ್ದರು. ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಇವರ ಬೆಡ್​ರೂಮ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಜ್ವಾಲೆಗೆ ವೈದ್ಯರು ಸುಟ್ಟು ಸಾವಿಗೀಡಾಗಿದ್ದಾರೆ.

ಕೆಲ ದಿನಗಳ ಹಿಂದೆ ಇವರು ಹಾಗೂ ಪತ್ನಿ ಮಧ್ಯೆ ಜಗಳವಾಗಿದ್ದರಿಂದ ಆಕೆ ಕಳೆದ ಒಂದು ವಾರದಿಂದ ತವರು ಮನೆಯಲ್ಲಿದ್ದರು. ಮನೆಯಲ್ಲಿ ಒಂಟಿಯಾಗಿದ್ದ ಡಾಕ್ಟರ್, ಮಾನಸಿಕ ಖಿನ್ನತೆಗೆ ಒಳಗಾಗಿ ಬೆಂಕಿ ಹಚ್ಚಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇವರು ತಮ್ಮ ಪ್ಯಾರಾ ಮೆಡಿಕಲ್ ಕಾಲೇಜಿನ ಮೊದಲ ಮಹಡಿಯಲ್ಲಿ ಕುಟುಂಬ ಸಮೇತ ವಾಸವಿದ್ದರು.

ಬೆಂಕಿಯಿಂದಾಗಿ ಕಟ್ಟಡವೇ ಹೊತ್ತಿ ಉರಿದಿದ್ದು, ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ಆರಿಸಿದ್ದಾರೆ. ಕೌಟುಂಬಿಕ ಕಲಹ ಕಾರಣಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದ್ದರೂ ಇನ್ನೂ ನಿಖರ ಮಾಹಿತಿ ದೃಢಪಟ್ಟಿಲ್ಲ. ಆದರ್ಶನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net