ಮೈಮೇಲೆ 'ಬಂಡೆ' ಎಳೆದುಕೊಂಡ ಪ್ರಶಾಂತ್ ಸಂಬರಗಿ!; ಮತ್ತೆ ವಿವಾದ, ಪೊಲೀಸರಿಗೆ ದೂರು..

Sambaragi
Published on

ಬೆಂಗಳೂರು: ಚಿತ್ರರಂಗ ಹಾಗೂ ರಾಜಕೀಯ ರಂಗದ ವಿಚಾರಗಳಿಗೆ ಸಂಬಂಧಿಸಿದಂತೆ ಆಗಾಗ ಮಧ್ಯಪ್ರವೇಶಿಸಿ ವಿವಾದಕ್ಕೀಡಾಗುತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇದೀಗ ಮೈಮೇಲೆ 'ಬಂಡೆ' ಎಳೆದುಕೊಂಡಿದ್ದಾರೆ.

ಅರ್ಥಾತ್ ಕನಕಪುರದ ಬಂಡೆ ಎಂದೇ ಕರೆಯಲ್ಪಡುವ ಡಿ.ಕೆ.ಶಿವಕುಮಾರ್​ ಸಹೋದರರನ್ನು ಕೆಣಕಲು ಹೋಗಿ ಮತ್ತೆ ವಿವಾದಕ್ಕೀಡಾಗಿದ್ದಾರೆ. ಮಾತ್ರವಲ್ಲ, ಇದೀಗ ಆ ಸಂಬಂಧ ಸಂಬರಗಿ ಮೇಲೆ ದೂರು ಕೂಡ ದಾಖಲಾಗಿದೆ.

ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದ ಕುರಿತು ಅವಹೇಳನ ಮಾಡಿದ್ದಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಅವರ ಬಗ್ಗೆಯೂ ಫೇಸ್​ಬುಕ್​ನಲ್ಲಿ ಅಪಮಾನಕಾರಿ ಪೋಸ್ಟ್ ಹಾಕಿದ್ದಾರೆ.

ಧಾರ್ಮಿಕ ಭಾವನೆ ಕೆಡಿಸುವ ಜತೆಗೆ ವೈಯಕ್ತಿಕ ನಿಂದನೆಯ ಪೋಸ್ಟ್​ ಹಾಕಿರುವ ಸಂಬರಗಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬುದಾಗಿ ಸಿ.ಲಕ್ಷ್ಮೀನಾರಾಯಣ ಎಂಬವರು ದಕ್ಷಿಣ ವಿಭಾಗದ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net