More

    ‘ಶಾಸಕ ಪೊಲೀಸರ ಪ್ಯಾಂಟ್ ಒದ್ದೆಯಾಗಿಸಬಲ್ಲ’: ಹೀಗಂದ ರಾಜಕಾರಣಿ ವಿರುದ್ಧ ಜಾರಿಯಾಯಿತು ಮಾನನಷ್ಟ ನೋಟಿಸ್​

    ಚಂಡೀಗಢ: ‘ಪೊಲೀಸರ ಪ್ಯಾಂಟ್ ಒದ್ದೆ ಆಗಿಸುವ ಶಕ್ತಿ ಶಾಸಕರಿಗಿದೆ..’ ಎಂಬಂಥ ವಿವಾದಾತ್ಮಕ ಹೇಳಿಕೆ ವಿರುದ್ಧ ಪೊಲೀಸರು ತಿರುಗಿಬಿದ್ದಿದ್ದು, ಹಾಗಂದವರಿಗೆ ಮಾನನಷ್ಟ ಮೊಕದ್ದಮೆ ಕೂಡ ಜಾರಿಗೊಳಿಸಿದ್ದಾರೆ. ಮಾತ್ರವಲ್ಲ, ವಿವಾದಾತ್ಮಕ ಹೇಳಿಕೆ ನೀಡಿದವರು ಕ್ಷಮೆಯಾಚಿಸಬೇಕು ಎಂದು ಪೊಲೀಸರು ಆಗ್ರಹಿಸಿದ್ದಾರೆ.

    ಹೌದು.. ಹೀಗೊಂದು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದು ಬೇರಾರೂ ಅಲ್ಲ, ಮಾಜಿ ಕ್ರಿಕೆಟಿಗ, ಪಂಜಾಬ್​ ಕಾಂಗ್ರೆಸ್​ ಮುಖ್ಯಸ್ಥ ನವಜೋತ್ ಸಿಂಗ್ ಸಿಧು. ‘ಶಾಸಕ ಪೊಲೀಸರ ಪ್ಯಾಂಟ್ ಒದ್ದೆಯಾಗಿಸಬಲ್ಲ’ ಎಂಬ ಹೇಳಿಕೆ ನೀಡಿದ್ದ ಇವರ ವಿರುದ್ಧ ಮಾನನಷ್ಟ ನೋಟಿಸ್​ ನೀಡಲಾಗಿದೆ.

    ಇದನ್ನೂ ಓದಿ: ಗಂಡ-ಹೆಂಡತಿ ಜಗಳದ ದುರ್ಲಾಭ ಪಡೆಯಲು ಯತ್ನಿಸಿದ ಪೊಲೀಸ್​; ಇನ್​ಸ್ಪೆಕ್ಟರ್​-ಎಎಸ್​ಐ ವಿರುದ್ಧ ದಾಖಲಾಯಿತು ಎಫ್​​ಐಆರ್​

    ‘ಪೊಲೀಸರನ್ನು ಅವಮಾನಿಸಿರುವ ಸಿಧು ವಿರುದ್ಧ ಮಾನನಷ್ಟ ನೋಟಿಸ್​ ಜಾರಿ ಮಾಡಲಾಗಿದೆ’ ಎಂದು ಚಂಡೀಗಢದ ಡಿವೈಎಸ್​ಪಿ ದಿಲ್ಷರ್ ಸಿಂಗ್​ ಚಾಂಡೇಲ್​ ಹೇಳಿದ್ದಾರೆ. ಮಾತ್ರವಲ್ಲ, ಸಬ್​ ಇನ್​ಸ್ಪೆಕ್ಟರ್​ರೊಬ್ಬರು ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ನವ್​ತೇಜ್​ ಸಿಂಗ್ ಚೀಮ ಅವರನ್ನು ಬೆಂಬಲಿಸಿ ಮಾತನಾಡುವಾಗ ಸಿಧು ಈ ಹೇಳಿಕೆ ನೀಡಿದ್ದರು. –ಏಜೆನ್ಸೀಸ್

    25 ಸಾವಿರಕ್ಕೂ ಅಧಿಕ ಮಾತ್ರೆ ತಿಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಗುಂಡು ಹೊಡೆದುಕೊಂಡು ಬಿಇಒ ಆತ್ಮಹತ್ಯೆ!

    ಕೊನೆಗೂ ಹೊರಬಿತ್ತು ಪುನೀತ್ ರಾಜಕುಮಾರ್ ಡೈರಿಯಲ್ಲಿದ್ದ ಆ ನಿರ್ಮಾಪಕರ ಹೆಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts