ಲೆಕ್ಕ ಪರಿಶೋಧನೆ ಒಂದೇ ಅಲ್ಲ: ಆಕಾಶದಷ್ಟು ಅವಕಾಶ..

Niranjan
Published on

ಒಂದಷ್ಟು ಆತ್ಮವಿಶ್ವಾಸ, ಒಂದಷ್ಟು ಧೈರ್ಯ-ಹುಮ್ಮಸ್ಸು, ರಿಸ್ಕ್ ತೆಗೆದುಕೊಳ್ಳುವ ಮನೋಭಾವ, ಹೊರಗಿನ ಆಗುಹೋಗುಗಳತ್ತ ಗಮನ ಇಡುವ ಮೂಲಕ, ಮೂಗಿನ ಮೇಲೆ ಬೆರಳಿಡುವಂಥ ಸಾಧನೆ ಮಾಡಬಹುದು ಎಂದು ಹುರಿದುಂಬಿಸಿದ್ದಾರೆ ನಾನಾ ಕ್ಷೇತ್ರಗಳ ಪ್ರಮುಖರು. ಆಲ್ ದಿ ಬೆಸ್ಟ್!

| ವಿ.ಕೆ. ನಿರಂಜನ್ ಲೆಕ್ಕ ಪರಿಶೋಧಕರು, ಬೆಂಗಳೂರು

ಚಾರ್ಟರ್ಡ್ ಅಕೌಂಟಿಂಗ್ ಕೋರ್ಸ್ ಮಾಡಿಕೊಂಡರೆ ಕೇವಲ ಖಾಸಗಿಯಾಗಿ ಲೆಕ್ಕ ಪರಿಶೋಧಕರಾಗಿ ಕೆಲಸ ಮಾಡುವುದಲ್ಲದೇ ಬೇರೆ ಸಾಕಷ್ಟು ಅವಕಾಶಗಳಿವೆ. ಉದ್ಯೋಗಕ್ಕೂ ಸೇರಿಕೊಳ್ಳಬಹುದಾಗಿದೆ. ಹಣಕಾಸು ಇಲಾಖೆ, ಹಣಕಾಸು ಸಂಸ್ಥೆಗಳು, ಎಲ್ಲ ಖಾಸಗಿ ಸಂಸ್ಥೆಗಳು, ಬ್ಯಾಂಕ್, ವಿಮೆ ಕಂಪೆನಿಗಳಲ್ಲಿ ಸಿಎಗಳಿಗೆ ಸಾಕಷ್ಟು ಅವಕಾಶಗಳಿವೆ. ಪ್ರತಿಯೊಂದು ಕಂಪೆನಿಯಲ್ಲಿಯೂ ಹಣಕಾಸು ನಿರ್ದೇಶಕರ ಹುದ್ದೆಯ ತನಕ ಬಡ್ತಿ ಪಡೆಯುವ ಅವಕಾಶಗಳಿವೆ. ಈಗ ಜಿಎಸ್​ಟಿ, ಆದಾಯ ತೆರಿಗೆ, ಪರೋಕ್ಷ ತೆರಿಗೆಗಳ ಬಗ್ಗೆಯೂ ಆಡಿಟ್ ಮಾಡುವ ಅವಕಾಶಗಳಿವೆ. ಸರ್ಕಾರದ ಕಂಪೆನಿಗಳು, ಖಾಸಗಿ ಕಂಪೆನಿಗಳು ಇವತ್ತು ಆಡಿಟ್ ಆಗಲೇಬೇಕಾಗಿದೆ. ಸಿಎ ಮಾಡಿದವರೇ ಆಡಿಟ್ ಮಾಡಬೇಕಾಗಿದೆ. ಇದರೆ ಜತೆಗೆ ಇರುವ ಮತ್ತೆರಡು ಕೋರ್ಸ್​ಗಳೆಂದರೆ ಕಂಪೆನಿ ಸೆಕ್ರೆಟರಿ ಮತ್ತು ಕಾಸ್ಟ್ ಅಂಡ್ ಮ್ಯಾನೇಜ್ಮೆಂಟ್ ಅಕೌಂಟಿಂಗ್. ಈ ವಲಯದಲ್ಲಿಯೂ ಸಾಕಷ್ಟು ಅವಕಾಶಗಳು ಇತ್ತೀಚಿನ ವರ್ಷಗಳಲ್ಲಿ ತೆರೆದುಕೊಳ್ಳುತ್ತಿವೆ. ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿ ಜತೆಗೆ ಬೇರೆ ಬೇರೆ ಕಾನೂನುಗಳ ಬಗ್ಗೆಯೂ ಸಲಹೆ ನೀಡುವ ಕಾರ್ಯವನ್ನು ಸಹ ಸಿಎ ಮಾಡಿದವರು ಮಾಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಇದೊಂದು ಉತ್ತಮ ಅವಕಾಶಗಳ ವಲಯವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net