ಪ್ಯಾಷನ್ ಇದ್ರೆ ಸಕ್ಸಸ್: ಆಕಾಶದಷ್ಟು ಅವಕಾಶ..

Geethanjali Santhosh
Published on

ಒಂದಷ್ಟು ಆತ್ಮವಿಶ್ವಾಸ, ಒಂದಷ್ಟು ಧೈರ್ಯ-ಹುಮ್ಮಸ್ಸು, ರಿಸ್ಕ್ ತೆಗೆದುಕೊಳ್ಳುವ ಮನೋಭಾವ, ಹೊರಗಿನ ಆಗುಹೋಗುಗಳತ್ತ ಗಮನ ಇಡುವ ಮೂಲಕ, ಮೂಗಿನ ಮೇಲೆ ಬೆರಳಿಡುವಂಥ ಸಾಧನೆ ಮಾಡಬಹುದು ಎಂದು ಹುರಿದುಂಬಿಸಿದ್ದಾರೆ ನಾನಾ ಕ್ಷೇತ್ರಗಳ ಪ್ರಮುಖರು. ಆಲ್ ದಿ ಬೆಸ್ಟ್!

| ಗೀತಾಂಜಲಿ ಸಂತೋಷ್ ಸಂಸ್ಥಾಪಕಿ, ನಲೇಸಾ ಫ್ಲೋರಲ್ ಫ್ಯೂಶನ್

ಯಾವುದೇ ಕೆಲಸವಾದರೂ ಮೊದಲು ಅದರ ಬಗ್ಗೆ ಪ್ಯಾಷನ್ (Passion) ಇರಬೇಕು. ಆ ಮಾತು ಇವೆಂಟ್ ಮ್ಯಾನೇಜ್​ವೆುಂಟ್ ಬಿಜಿನೆಸ್​ಗೂ ಅನ್ವಯಿಸುತ್ತದೆ. ಏನು ಮಾಡುತ್ತಿದ್ದೀರೋ ಅದರ ಬಗ್ಗೆ ಪ್ರೀತಿ-ಶ್ರದ್ಧೆ ಇಟ್ಟುಕೊಂಡರೆ ಮುಂದಿನ ಕೆಲಸ ಸಲೀಸು. ಈ ಉದ್ಯಮದಲ್ಲಿ ನಿಮ್ಮ ನಿರ್ದಿಷ್ಟ ಗುರಿ ಏನು ಎಂಬುದರ ಬಗ್ಗೆ ಸ್ಪಷ್ಟತೆ ಇರಬೇಕು. ಅದನ್ನು ಶತಾಯಗತಾಯ ಈಡೇರಿಸಿಕೊಳ್ಳಲು ಸತತವಾಗಿ ಏಕಮನಸ್ಸಿನಿಂದ ಶ್ರಮಪಡಬೇಕು. ಒಂದು ಹಂತದಲ್ಲಿ ಈ ಕೆಲಸ ಸಾಧ್ಯ ಆಗುವುದಿಲ್ಲ ಎನ್ನಿಸಬಹುದು. ಆದರೆ ಪ್ರಯತ್ನ ಬಿಡಬಾರದು. ಹಠಕ್ಕೆ ಬಿದ್ದು ಯಶಸ್ವಿಯಾಗಿ ಪೂರ್ಣಗೊಳಿಸುವ ಛಲ ಹೊಂದಿರಬೇಕು. ನನ್ನಿಂದ ಈ ಕೆಲಸ ಸಾಧ್ಯವಿದೆ ಎಂಬ ನಂಬಿಕೆಯನ್ನು ಮೊದಲು ನಾವು ಹೊಂದಿರಬೇಕು. ಸಾಧನೆ ಮಾಡಿದ ನಂತರವೂ ಯಶಸ್ಸು ನಮ್ಮದೊಬ್ಬರದೇ ಅಲ್ಲ ಎಂಬುದನ್ನು ನೆನಪಿಡಬೇಕು. ಗ್ರಾಹಕರು ನಿಜಕ್ಕೂ ಖುಷಿಯಾಗಿದ್ದರೆ ಅದೇ ನಮ್ಮ ಯಶಸ್ಸು. ನಮ್ಮ ಸುತ್ತಲಿನ ಜನರಿಗಾಗಿ ಹೆಚ್ಚುಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡಬೇಕು. ಅದು ಈ ಉದ್ಯಮದಲ್ಲಿ ಸಾಧ್ಯವಿದೆ. ನಮ್ಮೊಂದಿಗೆ ನಮ್ಮ ಸಹೋದ್ಯೋಗಿಗಳೂ ಬೆಳೆಯುವಂತೆ ನಿಗಾ ವಹಿಸಬೇಕು. ನಮ್ಮ ಜತೆಜತೆಗೆ ನಾವಿರುವ ಉದ್ಯಮವೂ ಬೆಳೆಯುವಂತಾಗಬೇಕು. ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಪ್ರತಿದಿನವೂ ನಾವು ಒಂದಲ್ಲ ಒಂದು ಹೊಸ ವಿಷಯವನ್ನು ಕಲಿಯುತ್ತಲೇ ಇರುತ್ತೇವೆ. ಅಷ್ಟರಮಟ್ಟಿಗಿನ ವಿನಯ ಮತ್ತು ಹೊಸತನದ ಬಗೆಗಿನ ತುಡಿತ ಇದ್ದರೆ ಈ ಉದ್ಯಮದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net