ದೀರ್ಘ ಬ್ಯಾಟರಿ ಜತೆಗೆ ಅನೇಕ ವಿಶೇಷತೆ ಹೊಂದಿದ ಒನ್​ಪ್ಲಸ್​ನ 5G ಸ್ಮಾರ್ಟ್‌ಫೋನ್‌ ಬಿಡುಗಡೆ

one plus nord ce 5g
ಸಾಂದರ್ಭಿಕ ಚಿತ್ರ
Published on

ದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ಹಲವು ಟೆಕ್ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಸ್ಯಾಮ್‌ಸಂಗ್, ರೆಡ್ಮಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದರೂ, ಒನ್​ಪ್ಲಸ್ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಆಗಿದೆ. ಒನ್​ಪ್ಲಸ್ ಕಂಪನಿಯು ವಿವಿಧ ಮಧ್ಯಮ ಶ್ರೇಣಿಯ ಫೋನ್​ಗಳು ಭಾರತದಲ್ಲಿ ಜನಪ್ರಿಯವಾಗಿದ್ದು, 25 ಸಾವಿರ ರೂ.ದಿಂದ 30 ಸಾವಿರ ರೂ.ದ ಬೆಲೆಯಲ್ಲಿ ಬರುವ ಒನ್​ಪ್ಲಸ್ ಫೋನ್​ಗಳು ಗ್ರಾಹಕರನ್ನು ಸೆಳೆದಿವೆ.

ಆದಾಗ್ಯೂ, ಅದೇ ಬೆಲೆ ಶ್ರೇಣಿಯಲ್ಲಿ ಕಂಪನಿಯು ನಾರ್ಡ್​ ಸರಣಿಯಲ್ಲಿ ತಂದಿರುವ ' ಒನ್ ಪ್ಲಸ್ ನಾರ್ಡ್​ CE 3 5G' ಮಾರಾಟವು ಭಾರತದಲ್ಲಿ ಅದಾಗಲೇ ಪ್ರಾರಂಭವಾಗಿದ್ದು, ಇದು ಹಲವಾರು ವಿಶೇಷತೆಗಳನ್ನು ಹೊಂದಿದೆ. ಒನ್ ಪ್ಲಸ್ ನಾರ್ಡ್ CE 3 ಸ್ಮಾರ್ಟ್ ಫೋನ್ 6.7-ಇಂಚಿನ ಫುಲ್ ಎಚ್ ಡಿ ಪ್ಲಸ್ ಅಮೊಲ್ಡ್ ಡಿಸ್ಪ್ಲೇಯನ್ನು ಹೊಂದಿದ್ದು, 2412 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ದರವನ್ನು ಹೊಂದಿದೆ.

ಇದನ್ನೂ ಓದಿ: ಕಳ್ಳತನದ ಶಂಕೆಯ ಮೇಲೆ ವ್ಯಕ್ತಿ ಅಪಹರಿಸಿ ಮನಬಂದಂತೆ ಥಳಿಸಿದ ಆರೋಪಿಗಳು 

ಈ ಫೋನ್​ Adreno 642L GPU ಜೊತೆಗೆ Qualcomm Snapdragon 782G SoC ಪ್ರೊಸೆಸರ್​ನಿಂದ ಚಾಲಿತವಾಗಿದ್ದು, ಸಂಗ್ರಹಣಾ ಸಾಮರ್ಥ್ಯದ ಆಧಾರ ಮೇಲೆ ಎರಡು ವಿಭಿನ್ನ ಮಾದರಿಗಳನ್ನು ಹೊಂದಿದೆ. 8GB+128GB ಮಾದರಿಯ ಸ್ಮಾರ್ಟ್​ಫೋನ್​ ಬೆಲೆ 26,999 ರೂ ಮತ್ತು 12GB+256GBನ ಬೆಲೆ 28,999 ರೂ. ಆಸುಪಾಸಿನಲ್ಲಿದೆ. ಅಲ್ಲದೇ, ಈ ಫೋನ್​ ಹಿಂಬದಿಯಲ್ಲಿ ಮೂರು ಕ್ಯಾಮರಾಗಳನ್ನು ಹೊಂದಿದ್ದು, 50MP ಸೋನಿ IMX890 ಪ್ರಾಥಮಿಕ ಕ್ಯಾಮರಾ, 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸೆನ್ಸಾರ್ ಕ್ಯಾಮರಾವ​​ನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ 16MP ಫ್ರಂಟ್ ಕ್ಯಾಮರಾ ಇದೆ.

ಇನ್ನು ದೀರ್ಘ ಕಾಲದ ಬಾಳಿಕೆ ಬರುವಂತಹ ಬ್ಯಾಟರಿಯನ್ನು ಹೊಂದಿರುವ ಈ ಫೋನ್​ 5,000mAh ಅನ್ನು ಹೊಂದಿದ್ದು, 80W SuperVOOC ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬರಲಿದೆ. ಈ ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್​​ ಸಿಸ್ಟಮ್​ನ್ನು ಹೊಂದಿದ್ದು, USB ಟೈಪ್-C ಪೋರ್ಟ್ಗಗೆ ಅನ್ನು ಬೆಂಬಲಿಸುತ್ತದೆ. ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯಲೆಂದು ಕಂಪನಿಯು ಈ 5ಜಿ ಪೋನ್​ನ್ನು ಬಿಡುಗಡೆಗೊಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಅಧಿಕೃತ ವೆಬ್​ಸೈಟ್​ ಪರಿಶೀಲಿಸಬಹುದಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net