ಸೈಬರ್, ಮಾಲ್‌ವೇರ್ ದಾಳಿ ತಡೆಯಲು ಶೀಘ್ರವೇ ಬರಲಿದೆ 'ಮಾಯಾ ಒಎಸ್': ಏನಿದು? ಇಲ್ಲಿದೆ ಮಾಹಿತಿ..

lock
ಸಾಂದರ್ಭಿಕ ಚಿತ್ರ
Published on

ದೆಹಲಿ: ಸೈಬರ್ ಮತ್ತು ಮಾಲ್‌ವೇರ್ ದಾಳಿಗಳನ್ನು ತಡೆಗಟ್ಟಲು ಭಾರತದ ರಕ್ಷಣಾ ಸಚಿವಾಲಯದ ಮುಂದಾಗಿದ್ದು, ಮೈಕ್ರೋಸಾಫ್ಟ್ ಓಎಸ್ ಬದಲಿಗೆ ತಮ್ಮ ಕಂಪ್ಯೂಟರ್‌ಗಳಲ್ಲಿ ಮಾಯಾ ಎಂಬ ನೂತನ ಆಪರೇಟಿಂಗ್ ಸಿಸ್ಟಮ್​​ಗೆ ಬದಲಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಕ್ಷಣೆ ಮತ್ತು ದೇಶದ ನಿರ್ಣಾಯಕ ಮೂಲಸೌಕರ್ಯಗಳ ಮೇಲೆ ಸೈಬರ್‌ದಾಕ್‌ಗಳ ಹೆಚ್ಚಳದಿಂದಾಗಿ ರಕ್ಷಣಾ ಸಚಿವಾಲಯವು ಈ ಕ್ರಮವನ್ನು ತೆಗೆದುಕೊಳ್ಳುವಂತೆ ಮಾಡಿದ್ದು, ಭಾರತದಲ್ಲಿನ ರಕ್ಷಣಾ ಸಚಿವಾಲಯವು ಮೈಕ್ರೊಸಾಫ್ಟ್ ಆಪರೇಟಿಂಗ್ ಸಿಸ್ಟಮ್​ಗೆ ಬದಲಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮಾಯಾ ಆಪರೇಟಿಂಗ್ ಸಿಸ್ಟಮ್​​ನನ್ನು ಬಳಸಲು ಮುಂದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿಗೆ ಬಾಸುಂಡೆ ಬರುವ ರೀತಿ ಹೊಡೆದ ಶಿಕ್ಷಕ: ರೊಚ್ಚಿಗೆದ್ದ ಪಾಲಕರು ಮತ್ತು ಸಂಬಂಧಿಕರು ಮಾಡಿದ್ದಿಷ್ಟು..

ಅಲ್ಲದೇ, ಮಾಯಾವು ಇಂಟರ್ಫೇಸ್​ನ್ನು ಹೊಂದಿರುವ ಜತೆಗೆ ವಿಂಡೋಸ್‌ನಂತಹ ಎಲ್ಲಾ ಕಾರ್ಯಚಟುವಟಿಕೆಗಳನ್ನು ಹೊಂದಿದೆ. ಸರ್ಕಾರಿ ಏಜೆನ್ಸಿಗಳು ಆರು ತಿಂಗಳೊಳಗೆ ಆಪರೇಟಿಂಗ್ ಸಿಸ್ಟಮ್ ಮಾಯಾವನ್ನು ಅಭಿವೃದ್ಧಿಪಡಿಸಿದ್ದು. ಸೈಬರ್‌ಟಾಕ್‌ಗಳು ಮತ್ತು ಮಾಲ್‌ವೇರ್ ದಾಳಿಗಳ ತೀವ್ರ ಹೆಚ್ಚಳವನ್ನು ತಡೆಯುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.

ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ಆಧಾರಿತ ಹೊಸ ಆಪರೇಟಿಂಗ್ ಸಿಸ್ಟಮ್ ಸೈಬರ್ ಸುರಕ್ಷತೆಯನ್ನು ಹೆಚ್ಚಿಸುವುದರೆ ಜತೆಗೆ ಇದು 'ಎಂಡ್‌ಪಾಯಿಂಟ್ ಡಿಟೆಕ್ಷನ್ ಮತ್ತು ಪ್ರೊಟೆಕ್ಷನ್' ಗಾಗಿ ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net