

ಸೀತಾಪುರ: ಮಗನ ಜೀವ ಉಳಿಸಲು ಹೋಗಿ ತಾಯಿಯೂ ಪ್ರಾಣವನ್ನು ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಭವಾನಿಪುರ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಲೋಕಸಭೆಯಲ್ಲಿ ಮಹಿಳಾ ಸಂಸದರಿಗೆ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್? ಸ್ಪೀಕರ್ಗೆ ದೂರು
ರೋಹಿತ್ ಜೈಸ್ವಾಲ್ (15) ಹಾಗೂ ಆತನ ತಾಯಿ ರಾಮ್ಸಹೇಲಿ ಮೃತ ದುರ್ದೈವಿಗಳಾಗಿದ್ದು, ಮಂಗಳವಾರ ರಾತ್ರಿ ಈ ರಾತ್ರಿ ಘಟನೆ ನಡೆದಿದೆ ಎಂದು ಹೇಳಲಾಗಿದೆ. ತಾಯಿ ಮತ್ತು ಮಗ ಒಂದೇ ಕಡೆ ಮಲಗಿದ್ದರು. ಈ ವೇಳೆ ರೋಹಿತ್ ರಾತ್ರಿ ಎದ್ದು ಮೊಬೈಲ್ ಚಾರ್ಜಿಂಗ್ ಅಳವಡಿಸಲು ಮುಂದಾದಾಗ ವಿದ್ಯುತ್ ಸ್ಪರ್ಶಿಸಿದ್ದು, ಬಿದ್ದು ಒದ್ದಾಡ ತೊಡಗಿದ್ದನು.
ಕೂಡಲೇ, ಮಗ ಒದ್ದಾಡುವುದನ್ನು ಕಂಡ ತಾಯಿಯು ಆತನನ್ನು ರಕ್ಷಿಸಲು ಯತ್ನಿಸಿದ್ದಾಳೆ. ಆದರೆ ದುರದೃಷ್ಟವಶಾತ್, ಈ ವೇಳೆ ತಾಯಿಗೂ ವಿದ್ಯುತ್ ಸ್ಪರ್ಶಿಸಿದ್ದು, ಸ್ವಲ್ಪ ಸಮಯದಲ್ಲೇ ಇಬ್ಬರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಬೆಳಿಗ್ಗೆ, ಬಹಳ ಹೊತ್ತಾದರೂ ಇಬ್ಬರು ಹೊರಗೆ ಬರದಿದ್ದರಿಂದ ಅನುಮಾನಗೊಂಡ ಸಂಬಂಧಿಕರು ಕೊಠಡಿಯ ಬಾಗಿಲು ತೆರೆದಾಗ ಇಬ್ಬರ ಮೃತದೇಹಗಳು ನೆಲದ ಮೇಲೆ ಬಿದ್ದಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಿಮಿಸಿದ ಪೊಲೀಸರಿಗೆ ಸಂಬಂಧಿಕರು ಮರಣೋತ್ತರ ಪರೀಕ್ಷೆ ನಡೆಸಲು ನಿರಾಕರಿಸಿದ್ದು, ತಾಯಿಯ ಮತ್ತು ಮಗನ ಅಂತಿಮ ವಿಧಿವಿಧಾನ ನೆರವೇರಿಸಲಾಗಿದೆ.(ಏಜೆನ್ಸೀಸ್)