ಯುವಕನಿಗೆ ಗಾಂಜಾ ಕೊಟ್ಟ ಕಾನ್‌ಸ್ಟೆಬಲ್​​ನ ಬಂಧಿಸಿದ ಪೊಲೀಸರು | Arrest

dk - 2025-06-05T223521.752
Published on

Arrest: ಗಾಂಜಾ ಪ್ರಕರಣದವೊಂದರಲ್ಲಿ ಅಬಕಾರಿ ಕಾನ್‌ಸ್ಟೆಬಲ್ ಅನ್ನು ಹೈದರಾಬಾದ್​ನ ಶಾದ್‌ನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಗುಲಾಮ್ ಸುಲ್ತಾನ್ ಅಹ್ಮದ್ ಬಂಧಿತ ಪೊಲೀಸ್​. ಶಾದ್‌ನಗರದಲ್ಲಿ ಪೊಲೀಸ್ ತಪಾಸಣೆ ವೇಳೆ ಗಾಂಜಾ ಸಹಿತ ಯುವಕನೊಬ್ಬ ಸಿಕ್ಕಿಬಿದ್ದಿದ್ದಾನೆ. ಆತನಿಂದ 1.5 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಕಾನ್‌ಸ್ಟೆಬಲ್ ತನಗೆ ಗಾಂಜಾ ಕೊಟ್ಟಿದ್ದಾಗಿ ಯುವಕ ಹೇಳಿದ್ದಾನೆ. ಅಬಕಾರಿ ಪೊಲೀಸರು ವಶಪಡಿಸಿಕೊಂಡ ಗಾಂಜಾವನ್ನು ಸುಲ್ತಾನ್ ಯುವಕನಿಗೆ ನೀಡಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಹೀಗಾಗಿ, ಪೊಲೀಸರು ಅಬಕಾರಿ ಕಾನ್‌ಸ್ಟೆಬಲ್ ಸುಲ್ತಾನ್ ಅಹ್ಮದ್ ಮತ್ತು ಯುವಕ ಅಮ್ಜದ್ ಅವರನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net