ಬೆಂಗಳೂರು ಕಾಲ್ತುಳಿತ ಪ್ರಕರಣ: RCB ವಿಜಯೋತ್ಸವದ ಬಗ್ಗೆ ಮೌನ ಮುರಿದ ಗೌತಮ್​​ ಗಂಭೀರ್​

dk - 2025-06-05T203550.258
Published on

RCB: ನಾನು ರೋಡ್ ಶೋಗಳನ್ನು(ವಿಜಯೋತ್ಸವ) ನಂಬುವುದಿಲ್ಲ. ಅದನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಟೀಮ್​​ ಇಂಡಿಯಾದ ಮುಖ್ಯಕೋಚ್​​ ಗೌತಮ್​​ ಗಂಭೀರ್​​ ಹೇಳಿದ್ದಾರೆ.

ಕ್ರೀಡಾಂಗಣದ ಹೊರಗೆ ಜನರು ಸತ್ತರೂ ಸಹ, ಆರ್‌ಸಿಬಿ ಕ್ರೀಡಾಂಗಣದೊಳಗೆ ಸಂಭ್ರಮಾಚರಣೆಯನ್ನು ಮುಂದುವರಿಸಿದ್ದಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದೆ. ಅಂತಹ ದೊಡ್ಡ ಕಾರ್ಯಕ್ರಮವನ್ನು ನಿರ್ವಹಿಸಲು ಸಿದ್ಧವಾಗಿಲ್ಲದಿದ್ದರೆ, ಇಂತಹ ವಿಜಯೋತ್ಸವಗಳನ್ನು ಸ್ಥಗಿತಗೊಳಿಸುವುದು ಉತ್ತಮ ಆಯ್ಕೆಯಾಗಿದೆ ಎಂದು ಗಂಭೀರ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

"ನಾನು ಯಾರನ್ನು ಹೊಣೆಗಾರರನ್ನಾಗಿ ಮಾಡುತ್ತೇನೆ ಎಂಬುದು ಮುಖ್ಯವಲ್ಲ. ನಾನು ಹೇಳುವುದೆನೆಂದರೆ, ನಾನು ಆಡುವಾಗಲೂ ಸಹ, ಅಂತಹ ರೋಡ್ ಶೋಗಳಲ್ಲಿ ನನಗೆ ನಂಬಿಕೆ ಇರಲಿಲ್ಲ. ನಾನು ಇಂದು ಮತ್ತು ಭವಿಷ್ಯದಲ್ಲಿಯೂ ರೋಡ್​​ ಶೋಗಳನ್ನು ಬೆಂಬಲಿಸಲ್ಲ ಅಲ್ಲದೆ, ಗೆಲುವು ಮುಖ್ಯ, ಆಚರಣೆಗಳು ಮುಖ್ಯ, ಆದರೆ ಜನರ ಜೀವನ ಹೆಚ್ಚು ಮುಖ್ಯ. ಆದ್ದರಿಂದ, ನೀವು ಆ ರೀತಿಯ ಜನಸಂದಣಿಯನ್ನು ನಿಭಾಯಿಸಲು ಸಿದ್ಧರಿಲ್ಲದಿದ್ದರೆ ಅಥವಾ ಸೂಕ್ತವಾಗಿಲ್ಲದಿದ್ದರೆ, ನೀವು ಈ ರೋಡ್ ಶೋಗಳನ್ನು ರದ್ದುಗೊಳಿಸಬಹುದು" ಎಂದು ಗಂಭೀರ್​ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net