

ಹೈದರಾಬಾದ್: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿ ಇಂಜಿನಿಯರ್ / ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಟ್ರೇನಿ ಇಂಜಿನಿಯರ್1- ಎಲೆಕ್ಟ್ರಾನಿಕ್ಸ್-16, ಮೆಕಾನಿಕಲ್-11, ಕಂಪ್ಯೂಟರ್ ಸೈನ್ಸ್ -6, ಟ್ರೇನಿ ಆಫೀಸರ್1- ಫೈನಾನ್ಸ್- 2 ಹುದ್ದೆಗಳಿವೆ. ಈ ಎಲ್ಲ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 25 ವರ್ಷ ಹಾಗೂ 1 ವರ್ಷ ಕಾರ್ಯಾನುಭವ ಹೊಂದಿರಬೇಕು.
ಪ್ರೊಜೆಕ್ಟ್ ಇಂಜಿನಿಯರ್1- ಎಲೆಕ್ಟ್ರಾನಿಕ್ಸ್-22, ಮೆಕಾನಿಕಲ್ -5, ಕಂಪ್ಯೂಟರ್ ಸೈನ್ಸ್-1, ಪ್ರೊಜೆಕ್ಟ್ ಆಫೀಸರ್1- ಹ್ಯೂಮನ್ ರಿಸೋರ್ಸ್- 1 ಹುದ್ದೆಗಳಿವೆ.
ಗರಿಷ್ಠ ವಯೋಮಿತಿ 28 ವರ್ಷ ಹಾಗೂ 2 ವರ್ಷ ಕಾರ್ಯಾನುಭವ ಹೊಂದಿರಬೇಕು. ಅರ್ಹರಿಗೆ ಸೂಕ್ತ ವಯೋ ಸಡಿಲಿಕೆ ಇದೆ.
ಆಯಾ ವಿಭಾಗದಲ್ಲಿ ಬಿಇ, ಬಿಟೆಕ್, ಬಿಎಸ್ಸಿ ಇಂಜಿನಿಯರಿಂಗ್, ಎಂಬಿಎ, ಎಂಎಸ್ಡಬ್ಲು, ಎಂಎಚ್ಆರ್ಎಂ ಪದವಿ ಪೂರೈಸಿರಬೇಕು. ಸೆಪ್ಟೆಂಬರ್ 22 ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು https://bel-india.in ವೆಬ್ಸೈಟ್ ಸಂಪರ್ಕಿಸಬಹುದು.