More

    ಕೇವಲ ಇಬ್ಬರು ಪರೀಕ್ಷಾರ್ಥಿಗಳಿಗಾಗಿ ಸಂಚರಿಸಿದ 248 ಪ್ರಯಾಣಿಕರ ಸಾಮರ್ಥ್ಯದ ಕಲ್ಕಾ- ಶಿಮ್ಲಾ ರೈಲು

    ನವದೆಹಲಿ: ಕಲ್ಕಾ-ಶಿಮ್ಲಾ ಮಾರ್ಗದ ರೈಲು ಐದು ತಿಂಗಳ ನಂತರ ಕೇವಲ ಇಬ್ಬರು ಪರೀಕ್ಷಾರ್ಥಿಗಳಿಗಾಗಿ ಸಂಚಾರ ನಡೆಸಿತು.
    ಸೋಲನ್‌ನಿಂದ ಶಿಮ್ಲಾಕ್ಕೆ ಹೋಗುವ ರೈಲು ಇಂದು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪರೀಕ್ಷೆಗೆ ಹಾಜರಾಗುತ್ತಿದ್ದ ಇಬ್ಬರು ಅಭ್ಯರ್ಥಿಗಳನ್ನು ಕರೆದೊಯ್ಯಿತು.

    ಇದನ್ನೂ ಓದಿ; ಬೆಂಗಳೂರಿನಲ್ಲಿ ಏರ್​​ಮನ್ ನೇಮಕಾತಿ ರ್ಯಾಲಿ ಸೆಪ್ಟೆಂಬರ್ 23 ರಿಂದ

    ಯುಪಿಎಸ್​​ಸಿ ನಡೆಸುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಕೋವಿಡ್ -19 ನ ಈ ವಿಷಮ ಸ್ಥಿತಿಯ ಮಧ್ಯೆ ಈ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಕಲ್ಕಾ-ಶಿಮ್ಲಾ ರೈಲ್ವೆಯ ಚೀಫ್ ಕಮರ್ಷಿಯಲ್ ಇನ್ಸ್‌ಪೆಕ್ಟರ್ ಅಮರ್ ಸಿಂಗ್ ಠಾಕೂರ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
    248 ಪ್ರಯಾಣಿಕರ ಸಾಮರ್ಥ್ಯದ ರೈಲಿನಲ್ಲಿ ಇಬ್ಬರು ಪ್ರಯಾಣಿಕರು ಇಂದು ಬೆಳಿಗ್ಗೆ ಈ ರೈಲಿನಲ್ಲಿ ಪ್ರಯಾಣಿಸಿದ್ದು, ಅದೇ ರೈಲು ಸಂಜೆ ಹಿಂತಿರುಗುತ್ತದೆ.

    ಇದನ್ನೂ ಓದಿ: ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ಗೆ ಕರೊನಾ ಪಾಸಿಟಿವ್

    ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಮತ್ತು ನೇವಲ್ ಅಕಾಡೆಮಿ (ಎನ್‌ಎ) ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಭಾರತೀಯ ರೈಲ್ವೆಯ ಕೇಂದ್ರ ರೈಲ್ವೆ 23 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಹೇಳಿದ್ದರು.

    ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್​​) ನ ಉದ್ಯೋಗಿಯಾಗುವುದು ನಿಮ್ಮ ಕನಸೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts