

ನವದೆಹಲಿ: ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನಲ್ಲಿ ಉದ್ಯೋಗ ಪಡೆಯಬೇಕೆಂಬುದು ನಿಮ್ಮ ಗುರಿಯೇ? ಹಾಗಿದ್ದಲ್ಲಿ ನಿಮಗಿದೆ ಈಗ ಅವಕಾಶ.
ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ (ಗ್ರಾಹಕ ವ್ಯವಹಾರಗಳ ಇಲಾಖೆ) ಸಂಸ್ಥೆಯಾದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಗ್ರೂಪ್ ಎ, ಬಿ ಮತ್ತು ಸಿ ಒಟ್ಟು 171 ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲುದ್ದೇಶಿಸಿದೆ.
ಗ್ರೂಪ್ ಎ - ಅಸಿಸ್ಟೆಂಟ್ ಡೈರೆಕ್ಟರ್- ಫೈನಾನ್ಸ್, ಲೀಗಲ್, ಮಾರ್ಕೆಟಿಂಗ್, ಲೈಬ್ರರಿ- ತಲಾ ಒಂದೊಂದು ಹುದ್ದೆಗಳಿವೆ.
ಗ್ರೂಪ್ ಬಿ - ಅಸಿಸ್ಟೆಂಟ್ ಸೆಕ್ಷನ್ ಆಫೀಸರ್-17, ಪರ್ಸನಲ್ ಅಸಿಸ್ಟೆಂಟ್- 16, ಜೂನಿಯರ್ ಟ್ರಾನ್ಸ್ಲೇಟರ್ (ಹಿಂದಿ)-1 ಹುದ್ದೆಗಳಿವೆ.
ಗ್ರೂಪ್ ಸಿ- ಲೈಬ್ರರಿ ಅಸಿಸ್ಟೆಂಟ್-1, ಸ್ಟೆನೋಗ್ರಾಫರ್-17, ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್-79, ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್-36 ಹುದ್ದೆಗಳಿವೆ. ಸೆಪ್ಟೆಂಬರ್ 26 ರವರೆಗೂ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ https://bit.ly/2QVq1l4 ವೆಬ್ಸೈಟ್ ನೋಡಬಹುದು.