ಬೆಂಗಳೂರಿನಲ್ಲಿ ಏರ್​​ಮನ್ ನೇಮಕಾತಿ ರ್ಯಾಲಿ ಸೆಪ್ಟೆಂಬರ್ 23 ರಿಂದ

IAF
Published on

ಬೆಂಗಳೂರು: ಭಾರತೀಯ ವಾಯುಪಡೆ (ಐಎಎಫ್) ಗ್ರೂಪ್ ಎಕ್ಸ್ (ಟೆಕ್ನಿಕಲ್ ಟ್ರೇಡ್) (ಎಜುಕೇಷನ್ ಇನ್​​ಸ್ಟ್ರಕ್ಟರ್ ಟ್ರೇಡ್ ಹೊರತುಪಡಿಸಿ) ನಲ್ಲಿ ಏರ್​​ಮನ್ ಹುದ್ದೆಗೆ ನೇಮಕಾತಿ ರ್ಯಾಲಿ ನಡೆಸಲಿದ್ದು, ಕರ್ನಾಟಕದ ಅವಿವಾಹಿತ ಪುರುಷ ಅಭ್ಯರ್ಥಿಗಳು ಪಾಲ್ಗೊಳ್ಳಲು ಕರೆ ನೀಡಿದೆ.

ಇಂಟರ್​ಮೀಡಿಯೇಟ್ / 10+2 / ತತ್ಸಮಾನ ಪರೀಕ್ಷೆಯನ್ನು ಗಣಿತ, ಭೌತಶಾಸ್ತ್ರ, ಇಂಗ್ಲಿಷ್ ವಿಷಯಗಳಲ್ಲಿ ಶೇ. 50 ಅಂಕಗಳೊಂದಿಗೆ ಹಾಗೂ ಇಂಗ್ಲಿಷ್ ನಲ್ಲಿ ಶೇ. 50 ಅಂಕಗಳಿಸಿ ಪಾಸಾಗಿರಬೇಕು. ಅಥವಾ ಮೂರು ವರ್ಷಗಳ ಡಿಪ್ಲೊಮಾ ಇಂಜಿನಿಯರಿಂಗ್ ಆಗಿರಬೇಕು.

2000 ರ ಜನವರಿ 17 ಮತ್ತು 2003ರ ಡಿಸೆಂಬರ್ 30 ರ ಮಧ್ಯೆ ಜನಿಸಿರಬೇಕು.  ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಇತ್ಯಾದಿ ನಡೆಸಲಾಗುತ್ತದೆ.  ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 4 ವರೆಗೆ ಬೆಂಗಳೂರಿನ ಮಣೆಕ್​​ಷಾ ಪರೇಡ್ ಗ್ರೌಂಡ್ ಹಾಗೂ 7 ಏರ್​​ಮನ್ ನೇಮಕಾತಿ ಕೇಂದ್ರದಲ್ಲಿ ನೇಮಕಾತಿ ರ್ಯಾಲಿ ನಡೆಯಲಿದೆ. ನಡೆಯಲಿದೆ.

ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 10ರ ವರೆಗೆ www.airmenselection.cdac.in ನಲ್ಲಿ ರ್ಯಾಲಿಗೆ ನೋಂದಣಿ ಮಾಡಲು ಅವಕಾಶವಿದೆ.  ಹೆಚ್ಚಿನ ಮಾಹಿತಿಗೆ ಅದೇ ವೆಬ್​ಸೈಟ್ ನೊಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net