ಸರ್ಕಾರಿ ಹುದ್ದೆಗಳ ನೇಮಕಾತಿಗೆ ಯಾವುದೇ ನಿರ್ಬಂಧವಿಲ್ಲ: ಹಣಕಾಸು ಸಚಿವಾಲಯ ಸ್ಪಷ್ಟನೆ

Nirmala Seetaraman
Published on

ನವದೆಹಲಿ: ಸರ್ಕಾರಿ ಹುದ್ದೆಗಳ ಭರ್ತಿಗೆ ಯಾವುದೇ ನಿರ್ಬಂಧ, ನಿಷೇಧವಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ಕರೊನಾ ಸಂಕಷ್ಟದಿಂದಾಗಿ ಈಗಾಗಲೇ ತುಂಬ ನಷ್ಟವಾಗಿದ್ದು, ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಹಾಗಾಗಿ ಖರ್ಚುಗಳನ್ನು ತಡೆಗಟ್ಟಲು, ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಿರ್ಬಂಧ ಹೇರಿದೆ ಎಂದು ವೆಚ್ಚ ಇಲಾಖೆ ವಿಭಾಗ ಸುತ್ತೋಲೆ ಹೊರಡಿಸಿದ ಬಗ್ಗೆ ಎಲ್ಲೆಡೆ ಚರ್ಚೆಯಾಗಿತ್ತು. ವಿರೋಧವೂ ವ್ಯಕ್ತವಾಗಿತ್ತು.

ಆದರೆ ಇದೀಗ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ. ಸಿಬ್ಬಂದಿ ಆಯ್ಕೆ ಆಯೋಗ, ಯುಪಿಎಸ್​ಸಿ, ರೈಲ್ವೆ ನೇಮಕಾತಿ ಮಂಡಳಿ ಸೇರಿ ಎಲ್ಲ ವಿಭಾಗಗಳಲ್ಲೂ ಈ ಹಿಂದಿನಂತೆಯೇ, ಯಾವುದೇ ಅಡೆತಡೆಗಳಿಲ್ಲದೆ ನೇಮಕಾತಿ ಪ್ರಕ್ರಿಯೆ ಮುಂದುವರಿಯುತ್ತದೆ ಎಂದು ಸಚಿವಾಲಯ ಪೋಸ್ಟ್ ಮಾಡಿದೆ.

ವೆಚ್ಚ ಇಲಾಖೆ ಸೆಪ್ಟೆಂಬರ್​ 4ರಂದು ಹೊರಡಿಸಿದ ಸುತ್ತೋಲೆಯು, ಹುದ್ದೆಗಳ ರಚನೆಯ ಆಂತರಿಕ ಕಾರ್ಯವಿಧಾನಕ್ಕೆ ಸಂಬಂಧಪಟ್ಟಿದ್ದು. ಇದು ನೇಮಕಾತಿ ವಿಚಾರಕ್ಕೆ ಸಂಬಂಧಿಸಿದ್ದಲ್ಲ. ಯಾವುದೇ ನಿರ್ಬಂಧವೂ ಇಲ್ಲ ಎಂದು ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net