More

    ಕರೊನಾ ಮರು ಸೋಂಕು; ತಿಂಗಳ ಬಳಿಕ ಮತ್ತೆ ಕೋವಿಡ್​; ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೊದಲ ಪ್ರಕರಣ…!

    ಬೆಂಗಳೂರು: ಜಗತ್ತಿನ ವಿವಿಧೆಡೆ ಕಂಡು ಬರುತ್ತಿದ್ದ ಕೋವಿಡ್​ ಮರು ಸೋಂಕಿನ ಪ್ರಕರಣವೀಗ ರಾಜಧಾನಿ ಬೆಂಗಳೂರಿನಲ್ಲೂ ವರದಿಯಾಗುವ ಮೂಲಕ ಭಾರಿ ಆತಂಕ ಮೂಡಿಸಿದೆ.

    ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್​ ಆಸ್ಪತ್ರೆಯ ವೈದ್ಯರು ವ್ಯಕ್ತಿಯೊಬ್ಬನಿಗೆ ಮತ್ತೆ ಕರೊನಾ ಸೋಂಕು ಕಾಣಿಸಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ. ಇದು ರಾಜಧಾನಿಯಲ್ಲಿ ಆ ಮೂಲಕ ರಾಜ್ಯದಲ್ಲೇ ಮರು ಸೋಂಕಿನ ಮೊದಲ ಪ್ರಕರಣವೆನಿಸಿದೆ.

    ಇದನ್ನೂ ಓದಿ; ವಿಡಿಯೋ: ಹೀಗಿದ್ದರೆ ಕೋವಿಡ್​ ಹರಡದೇ ಇರುತ್ತಾ…? 75 ಸಿಬ್ಬಂದಿ ಸೋಂಕಿಗೊಳಗಾದ ಢಾಬಾದಲ್ಲಿ ಹೌಸ್​ಫುಲ್​ ಶೋ​…! 

    ಒಂದು ತಿಂಗಳ ಹಿಂದಷ್ಟೇ ಕೋವಿಡ್​ನಿಂದ ಗುಣಮುಖಳಾಗಿದ್ದ 27 ವರ್ಷದ ಮಹಿಳೆಯಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
    ಕಳೆದ ಜುಲೈನಲ್ಲಿ ಈ ಮಹಿಳೆಯಲ್ಲಿ ಮೊದಲ ಬಾರಿಗೆ ಕೋವಿಡ್​ ಕಾಣಿಸಿಕೊಂಡಿತ್ತು. ಆಕೆಗೆ ಇತರ ಯಾವುದೇ ಕಾಯಿಲೆಗಳಿರಲಿಲ್ಲ. ಸಣ್ಣದಾಗಿ ಕರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕೆಮ್ಮು ಹಾಗೂ ಜ್ವರವಿತ್ತು. ಆಸ್ಪತ್ರೆಗೆ ದಾಖಲಿಗಿ ಚಿಕಿತ್ಸೆ ಪಡೆದ ನಂತರ ಕರೊನಾ ನೆಗೆಟಿವ್​ ಎಂದು ವರದಿ ಬಂದಿತ್ತು. ಸಂಪೂರ್ಣ ಗುಣಮುಖಳಾದ ಮೇಲೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.

    ಎರಡೆರಡು ಬಾರಿ ಪರೀಕ್ಷೆ ನಡೆಸಿದ ಬಳಿಕ ಜುಲೈ 24 ರಂದು ರೋಗಿಯನ್ನು ಮನೆಗೆ ಕಳುಹಿಸಲಾಗಿತ್ತು. ಆದರೆ, ಆಗಸ್ಟ್​ ಕೊನೆಯ ವಾರದಲ್ಲಿ ಚಿಕ್ಕ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡು ಮತ್ತೆ ಆಸ್ಪತ್ರೆಗೆ ದಾಖಲಾದಳು. ಪರೀಕ್ಷಿಸಿದಾಗ ಕೋವಿಡ್​ ಖಚಿತವಾಗಿತ್ತು ಎಂದು ಆಸ್ಪತ್ರೆಯ ಸಾಂಕ್ರಾಮಿಕ ರೋಗ ತಜ್ಞ ಡಾ. ಪ್ರತೀಕ್​ ಪಾಟೀಲ್​ ಹೇಳಿದ್ದಾರೆ.

    ಇದನ್ನೂ ಓದಿ; ರಷ್ಯಾ ಲಸಿಕೆ ಸುರಕ್ಷಿತ, ಪರಿಣಾಮಕಾರಿ; ‘ಸ್ಪುಟ್ನಿಕ್​-ವಿ’ಗೆ ಸಿಕ್ತು ಜಾಗತಿಕ ಮನ್ನಣೆ 

    ಇನ್ನೊಂದು ಮುಖ್ಯ ವಿಷಯವೆಂದರೆ, ಕೋವಿಡ್​ ಸೋಂಕು ಕಾಣಿಸಿಕೊಂಡ ಬಳಿಕ ರೋಗಿಯಲ್ಲಿ ರೋಗ ಪ್ರತಿರೋಧಕ ಶಕ್ತಿ ಉಂಟಾಗುತ್ತಿದೆ. ಆದರೆ ಈ ಮಹಿಳೆಯಲ್ಲಿ ಪ್ರತಿಕಾಯಗಳೇ ಸೃಷ್ಟಿಯಾಗಿರಲಿಲ್ಲ. ಎರಡೂ ಬಾರಿಯೂ ಆಕೆಯಲ್ಲಿ ತೀವ್ರ ಪ್ರಮಾಣದ ಜ್ವರ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
    ಸಮಾಧಾನದ ಸಂಗತಿ ಎಂದರೆ, ಮರು ಸೋಂಕು ತುಂಬಾ ವಿರಳವಂತೆ, ರಾಜ್ಯದಲ್ಲಿ 3.89 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ಮೊದಲ ಪ್ರಕರಣ ಇದಾಗಿದೆ. ಜತೆಗೆ, ಮೊದಲಿನದ್ದಕ್ಕಿಂತ ಕಡಿಮೆ ತೀವ್ರತೆಯದ್ದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

    ಇನ್ನೆಂಟು ತಿಂಗಳು ಸಾರ್ವತ್ರಿಕವಾಗಿ ಲಸಿಕೆ ಬಳಕೆಗೆ ದೊರೆಯಲ್ಲ; ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts