More

    ಇನ್ನೆಂಟು ತಿಂಗಳು ಸಾರ್ವತ್ರಿಕವಾಗಿ ಲಸಿಕೆ ಬಳಕೆಗೆ ದೊರೆಯಲ್ಲ; ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ

    ನವದೆಹಲಿ: ಕರೊನಾ ಲಸಿಕೆಗಳ ಸಂಶೋಧನೆಯಲ್ಲಿ ಪೈಪೋಟಿ ತೀವ್ರಗೊಂಡಿದೆ. ಶತಾಯ ಗತಾಯ ಆದಷ್ಟು ಬೇಗ ಇದನ್ನು ಜನರಿಗೆ ತಲುಪಿಸುವಂತಾಗಲು ಇನ್ನಿಲ್ಲದ ತರಾತುರಿ ನಡೆದಿದೆ. ತುರ್ತು ಬಳಕೆಗೆ ಅವಕಾಶ ದೊರೆಯುವಂತಾಗಲು ಕಾನೂನಿನ ತಿದ್ದುಪಡಿಗೂ ಮುಂದಾಗಲಾಗುತ್ತಿದೆ.

    ಆದರೆ, ಪ್ರಯೋಗದಲ್ಲಿ ಮುಂಚೂಣಿಯಲ್ಲಿರುವ ಲಸಿಕೆಗಳು ಈವರೆಗೆ ಕಾರ್ಯಕ್ಷಮತೆ ಬಗ್ಗೆ ಸ್ಪಷ್ಟ ಅಂಶಗಳನ್ನು ತೋರ್ಪಡಿಸಿಲ್ಲ. ಅದರಲ್ಲೂ, ತಾನು ನಿರೀಕ್ಷಿಸುವ ಶೇ.50 ಸಾಮರ್ಥ್ಯವನ್ನು ಪ್ರದರ್ಶಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.

    ಇದನ್ನೂ ಓದಿ; ವಿಡಿಯೋ: ಹೀಗಿದ್ದರೆ ಕೋವಿಡ್​ ಹರಡದೇ ಇರುತ್ತಾ…? 75 ಸಿಬ್ಬಂದಿ ಸೋಂಕಿಗೊಳಗಾದ ಢಾಬಾದಲ್ಲಿ ಹೌಸ್​ಫುಲ್​ ಶೋ​…! 

    ಈ ಮೂಲಕ ಲಸಿಕೆ ಸಂಶೋಧನೆಯಲ್ಲಿ ಕಠಿಣ ಪರೀಕ್ಷೆ, ಕಾರ್ಯಕ್ಷಮತೆ ಹಾಗೂ ಸುರಕ್ಷತೆ ಅಂಶಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಸೂಚ್ಯವಾಗಿ ತಿಳಿಸಿದೆ.
    ಹೀಗಾಗಿ ಮುಂದಿನ ವರ್ಷದ ಮಧ್ಯದವರೆಗೂ ಸಾರ್ವತ್ರಿಕವಾಗಿ ಕರೊನಾ ಲಸಿಕೆ ಲಭ್ಯವಾಗುವ ಸಾಧ್ಯತೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ವಕ್ತಾರೆ ಮಾರ್ಗರೇಟ್​ ಹ್ಯಾರೀಸ್​ ಹೇಳಿದ್ದಾರೆ.

    ಲಸಿಕೆ ನಿಜವಾಗಿಯೂ ಎಷ್ಟು ಪರಿಣಾಮಕಾರಿಯಾಗಿದೆ, ಸುರಕ್ಷಿತವಾಗಿದೆ ಎಂಬುದನ್ನು ತಿಳಿಯಲು ಮೂರನೇ ಹಂತದ ಪರೀಕ್ಷೆ ಬಹುದಿನಗಳ ಕಾಲ ನಡೆಯಬೇಕು ಎಂದಿದ್ದಾರೆ. ಈ ಹಂತದಲ್ಲಿ ಭಾರಿ ಸಂಖ್ಯೆಯ ಜನರ ಮೇಲೆ ಪರೀಕ್ಷೆ ನಡೆಸಲಾಗುತ್ತದೆ. ಎಲ್ಲ ಹಂತಗಳ ಸಂಶೋಧನಾ ಫಲಿತಾಂಶದ ಮಾಹಿತಿಯನ್ನು ಹಂಚಿಕೊಂಡು ಹೋಲಿಸಿ ನೋಡಬೇಕು. ಸದ್ಯ ಬಹಳಷ್ಟು ಜನರ ಮೇಲೆ ಲಸಿಕೆಗಳನ್ನು ಪ್ರಯೋಗಿಸಲಾಗಿದೆ. ಆದರೆ, ಅವೆಷ್ಟು ಪರಿಣಾಮಕಾರಿ ಎಂಬುದರ ಬಗ್ಗೆ ಈಗ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಅವರು ಹೇಳಿದ್ದಾರೆ.

    ರಷ್ಯಾ ಲಸಿಕೆ ಸುರಕ್ಷಿತ, ಪರಿಣಾಮಕಾರಿ; ‘ಸ್ಪುಟ್ನಿಕ್​-ವಿ’ಗೆ ಸಿಕ್ತು ಜಾಗತಿಕ ಮನ್ನಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts