More

    ಲಸಿಕೆ ಹಾಕಿಸಿ ರಾಸುಗಳ ರೋಗ ಮುಕ್ತಗೊಳಿಸಿ

    ಚಳ್ಳಕೆರೆ: ಬಿಸಿಲ ಧಗೆ ಇರುವ ಕಾರಣ ಬೆಳಗ್ಗೆ ಹಳ್ಳಿಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯ ನಿರ್ವಹಿಸಬೇಕು ಎಂದು ಪಶು ಇಲಾಖೆ ಸಿಬ್ಬಂದಿಗೆ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪನಿರ್ದೇಶಕಿ ಡಾ.ಇಂದಿರಾಬಾಯಿ ಹೇಳಿದರು.

    ತಾಲೂಕಿನ ರಾಮಜೋಗಿಹಳ್ಳಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು, ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿ, ರಾಸುಗಳಲ್ಲಿ ಕಾಲು ಬಾಯಿ ರೋಗ, ಜ್ವರ ಮತ್ತು ಗಂಟು ರೋಗಗಳು ಕಾಣಿಸಿಕೊಳ್ಳದಂತೆ ಲಸಿಕೆ ನೀಡಲಾಗುತ್ತಿದೆ. ಇಲಾಖೆ ಸಿಬ್ಬಂದಿ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ಈ ಕಾರ್ಯದಲ್ಲಿ ತೊಡಗಬೇಕು ಎಂದರು.

    ತಾಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಸ್.ರೇವಣ್ಣ ಮಾತನಾಡಿ, ತಾಲೂಕಿನಲ್ಲಿ 70 ಸಾವಿರ ದನ, ಎಮ್ಮೆಗಳ ಮಾಹಿತಿ ಇದೆ. ಏ.1ರಿಂದ ಕಾಲುಬಾಯಿ ರೋಗ ಲಸಿಕೆ ಕಾರ್ಯ ಆರಂಭಿಸಲಾಗಿದೆ. ತಾಲೂಕಿನ ಪಶು ಚಿಕಿತ್ಸಾ ಕೇಂದ್ರಗಳ ಪ್ರತಿ ಹಳ್ಳಿಗಳಿಗೂ ಲಸಿಕೆ ಜಾಗೃತಿಗಾಗಿ 40 ಜನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

    ರೈತರು ಲಸಿಕಾ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಜಾನುವಾರುಗಳ ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಪಶು ಪರೀಕ್ಷಕ ಜಯಣ್ಣ, ಭೀಮರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts