More

    ಕಾಲುಬಾಯಿ ಜ್ವರ ನಿರ್ಲಕ್ಷೃ ಮಾಡಬೇಡಿ

    ಶಿಕಾರಿಪುರ: ಜಿಲ್ಲೆಯಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆಯಾಗುವ ತಾಲೂಕು ಶಿಕಾರಿಪುರ. ಹಾಗಾಗಿ ಜಾನುವಾರುಗಳ ಸುರಕ್ಷತೆಯೇ ನಮಗೆ ಮೊದಲ ಆದ್ಯತೆ ಎಂದು ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಹೇಳಿದರು.

    ಸೋಮವಾರ ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಕಾಲುಬಾಯಿ ಜ್ವರ ನಿರೋಧ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪಶುಪಾಲನೆ ಇಲಾಖೆಯಿಂದ ಕಾಲುಬಾಯಿ ಜ್ವರಕ್ಕೆ ಲಸಿಕೆ ನೀಡುತ್ತಿದ್ದಾರೆ. ಜಾನುವಾರುಗಳಿಗೆ ಕಾಲುಬಾಯಿ ಜ್ವರ ಮಾರಕವಾಗಿದ್ದು, ರೈತರು ಲಸಿಕೆ ಹಾಕಿಸಬೇಕು. ಇಂತಹ ಕಾಯಿಲೆಗಳನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸಬಾರದು. ಯಾವುದೇ ರೀತಿಯ ಮೌಢ್ಯಗಳನ್ನು ನಂಬಬೇಡಿ. ಲಸಿಕೆ ಹಾಕುವುದರಿಂದ ಹಸುವಿಗೆ ಗರ್ಭಪಾತವಾಗುವುದಿಲ್ಲ ಮತ್ತು ಹಾಲಿನ ಪ್ರಮಾಣವೂ ಕಡಿಮೆ ಆಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು.
    ಬರಗಾಲ, ಕರೊನಾ ಸಂದರ್ಭದಲ್ಲಿ ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ವರ್ಗದವರನ್ನು ಕೈಹಿಡಿದದ್ದು ಹೈನುಗಾರಿಕೆ. ನಮ್ಮ ತಾಲೂಕಿನಲ್ಲಿ ಹೈನುಗಾರಿಕೆ ಚೆನ್ನಾಗಿದೆ. ರೈತರು ಜಾನುವಾರುಗಳ ಪಾಲನೆ, ಪೋಷಣೆ ಜತೆಗೆ ರೋಗಗರು ಬಾರದಂತೆ ಮುಂಜಾಗ್ರತೆ ವಹಿಸಬೇಕು. ಏಕೆಂದರೆ ರೈತರಿಗೆ ಹೈನುಗಾರಿಕೆ ಆರ್ಥಿಕವಾಗಿ ಬಲ ತುಂಬುತ್ತದೆ ಎಂದು ತಿಳಿಸಿದರು.
    ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ವಿನಯ್ಕುಮಾರ್ ಮಾತನಾಡಿ, ಏ.1ರಿಂದ 30ರವರೆಗೆ ರಾಜ್ಯಾದ್ಯಂತ ಕಾಲುಬಾಯಿ ಜ್ವರ ನಿರೋಧ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವೈದ್ಯರು ಸಿಬ್ಬಂದಿ ಮನೆ ಮನೆಗೆ ತೆರಳಿ ಉಚಿತ ಲಸಿಕೆ ಹಾಕುತ್ತಿದ್ದಾರೆ. ಕಾಯಿಲೆ ಬರುವ ಮೊದಲೇ ಲಸಿಕೆ ಹಾಕಿಸಬೇಕು. ನಿಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದರು.
    ತಾಫಂ ಇಒ ರಾಜು, ಪಶುವೈದ್ಯರು, ಸಿಬ್ಬಂದಿ, ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts