ಒಡಿಶಾ ರೈಲು ದುರಂತ; ಗೂಡ್ಸ್​​ ಟ್ರೈನ್​ನಡಿ ಸಿಲುಕಿ 6 ಕಾರ್ಮಿಕರು ಮೃತ್ಯು

Odisha Train Accident
Published on

ಒಡಿಸಾ:  ಬಾಲಸೋರ್​ ರೈಲು ದುರಂತ ಮಾಸುವ ಮುನ್ನವೇ ಇದೀಗ ಅದೇ ರೀತಿಯ ಘಟನೆ ಒಂದು ಒಡಿಶಾದಲ್ಲಿ ನಡೆದಿದ್ದು ಆರು ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.

ಒಡಿಶಾದ ಜಜ್‌ಪುರ್ ಕಿಯೋಂಜರ್ ರಸ್ತೆಯಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಗೂಡ್ಸ್​ ರೈಲಿನಡಿ ಸಿಲುಕಿ ಆರು ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ಧಾರೆ ಎಂದು ವರದಿಯಾಗಿದೆ.

Odisha Train Accident 1

ಭಾರಿ ಮಳೆ ಸುರಿಯುತ್ತಿದ್ದ ಕಾರಣ ಕಾರ್ಮಿಕರು ರೈಲಿನ ಬೋಗಿಗಳಡಿ ಆಶ್ರಯ ಪಡೆದಿದ್ದರು. ಈ ವೇಳೆ ರೈಲು ಏಕಾಏಕಿ ಚಲಿಸಿದ ಕಾರಣ ಕಾರ್ಮಿಕರು ಬೇರೆಡೆ ತೆರಳಲು ಸಾಧ್ಯವಾಗದೆ ರೈಲಿನಡಿ ಸಿಲುಕಿ ಪ್ರಾಣ ಬಿಟ್ಟಿದ್ದಾರೆ.

ಗಾಯಾಳುಗಳನ್ನು ಕಟಕ್​ನಲ್ಲಿರುವ ಎಸ್​ಸಿಬಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗತ್ಯ ನೆರವನ್ನು ಒದಿಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net