More

    ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್​ನಲ್ಲಿ ಅಭಿಷೇಕ್​ ಅಂಬರೀಶ್​-ಅವಿವಾ ಬಿದ್ದಪ್ಪ ಅದ್ಧೂರಿ ಆರತಕ್ಷತೆ

    ಬೆಂಗಳೂರು: ನಟ ಅಭೀಷೇಕ್​ ಅಂಬರೀಶ್​-ಅವಿವಾ ಬಿದ್ದಪ್ಪ ಆರತಕ್ಷತೆಗೆ ನಗರದ ಪ್ಯಾಲೇಸ್​ ಗ್ರೌಂಡ್​ ಸಜ್ಜಾಗಿದ್ದು, ಇದಕ್ಕಾಗಿ ಬೃಹತ್​ ಶಾಗ್ಲಿಯರ್ ಡಿಸೈನ್​ ಇರುವ ವೇದಿಕೆಯನ್ನು ಸಿದ್ದಪಡಿಸಲಾಗಿದೆ.

    ಜೂನ್​ 5 ರಂದು ಅಭಿ-ಅವಿವಾ ಜೋಡಿ ಅದ್ಧೂರಿಯಾಗಿ ವಿವಾಹವಾಗಿದ್ದರು. ರೆಬೆಲ್​ ಸ್ಟಾರ್ ದಿ. ​ ಅಂಬರೀಶ್​ ಪುತ್ರನ ಮದುವೆಗೆ ದಕ್ಷಿಣ ಭಾರತದ ಖ್ಯಾತ ತಾರೆಯರು, ರಾಜಕೀಯ ಕ್ಷೇತ್ರದ ಗಣ್ಯರು ಸೇರಿದಂತೆ ಅನೇಕರು ಬಂದು ನವ ಜೋಡಿಗಳಿಗೆ ಶುಭ ಹಾರೈಸಿದ್ದರು.

    ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್ ನಿರ್ಮಾಣ

    ಜೂನ್​ 7ರಂದು ಅಭಿ-ಅವಿವಾ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅದರ ತಯಾರಿ ಕೂಡ ಜೋರಾಗಿ ನಡೆದಿದೆ. ಇಂಡಿಯನ್ ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್‌ನಲ್ಲಿ ಸ್ಟೇಜ್ ನಿರ್ಮಾಣ ಮಾಡಿರುವುದು ಕಾರ್ಯಕ್ರಮದ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ.

    Stage Decoration

    ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಹೆರಿಗೆ ಮಾಡಲು ಮುಂದಾದ ನರ್ಸ್​; ಗರ್ಭಿಣಿ ಮೃತ್ಯು

    300 ಶಾಗ್ಲೀಯರ್ಸ್​ ಜೊತೆಗೆ 72 ಅಡಿ ಅಗಲ 32 ಉದ್ದದ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಭಾರತದಲ್ಲೇ ಪ್ರಥಮ ಬಾರಿಗೆ ಈ ರೀತಿಯ ಡಿಸೈನ್​ ಮಾಡಲಾಗಿದ್ದು ದೆಹಲಿಯ ಮೊರದಬಾದ್​ನಲ್ಲಿ ತಯಾರಾದ ಕ್ರಿಸ್ಟಲ್ ಶಾಗ್ಲಿಯರ್​​ಗಳನ್ನು ತರಿಸಲಾಗಿದೆ.

    ದಕ್ಷಿಣ ಭಾರತದ ಸ್ಟಾರ್ ನಟರು, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್​ ಅಬ್ದುಲಾ, ಗುಲಾಮ್ ನಬಿ ಆಜಾದ್, ಹಿರಿಯ ಕಾಂಗ್ರೆಸ್ ಮುಖಂಡ ಶತ್ರುಜ್ಞಾ ಸಿನ್ಹಾ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts