More

    ಒಡಿಶಾ ರೈಲು ದುರಂತ; ಪರಿಹಾರಕ್ಕಾಗಿ ಬೇರೆ ಶವವನ್ನು ತನ್ನ ಗಂಡ ಎಂದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​!

    ಒಡಿಶಾ: ಬಾಲಸೋರ್​ ರೈಲು ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ರೈಲ್ವೆ ಇಲಾಖೆ ಹಾಗೂ ಒಡಿಶಾ ಸರ್ಕಾರ ಘೋಷಿಸಿದ್ದ ಪರಿಹಾರ ಮೊತ್ತವನ್ನು ಪಡೆಯಲು ಹೋಗಿ ಮಹಿಳೆ ಒಬ್ಬರು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.

    ಘಟನೆಯೂ ಒಡಿಶಾದ ಕಟಕ್​ ಜಿಲ್ಲೆಯ ಮಣಿಯಬಂಧದಲ್ಲಿ ನಡೆದಿದ್ದು ಪೇಚಿಗೆ ಸಿಲುಕಿರುವವರನ್ನು ಗೀತಾಂಜಲಿ ದತ್ತಾ ಎಂದು ಗುರುತಿಸಲಾಗಿದ್ದು ಪೊಲೀಸರು ಪರಾರಿಯಾಗಿರುವ ಮಹಿಳೆಗಾಗಿ ತಲಾಶ್​ ನಡೆಸಿದ್ಧಾರೆ.

    ಪ್ರಕರಣದ ಹಿನ್ನಲೆ?

    ಕಳೆದ ಶುಕ್ರವಾರ ಸಂಭವಿಸಿದ ಬಾಲಸೋರ್​ ರೈಲು ದುರಂತದಲ್ಲಿ ತನ್ನ ಪತಿ ಬಿಜಯ್​ ದತ್ತಾ ಎಂಬುವವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಮಹಿಳೆ ಶವ ಒಂದನ್ನು ಗುರುತಿಸಿದ್ದರು. ಆ ಬಳಿಕ ಅಧಿಕಾರಿಗಳು ಮೃತ ವ್ಯಕ್ತಿಯ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮಹಿಳೆ ಸುಳ್ಳು ಹೇಳಿರುವುದು ಕಂಡು ಬಂದ ಕಾರಣ ಆಕೆಗೆ ಈ ರೀತಿ ಮಾಡದಂತೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.

    Accident Victim

    ತಾನು ಬದುಕಿರುವಾಗಲೇ ತನ್ನ ಪತ್ನಿ ಈ ರೀತಿ ಮಾಡಿದ್ದನ್ನು ತಿಳಿದು ಮಣಿಯಬಂಧ ಪೊಲೀಸ್​ ಠಾಣೆಯಲ್ಲಿ ಮಹಿಳೆಯ ಪತಿ ಬಿಜಯ್​ ದತ್ತಾ ಈ ಕುರಿತು ದೂರು ದಾಖಲಿಸಿದ್ದಾರೆ. ಕೌಟುಂಬಿಕ ಕಲಹದಿಂದ ಕಳೆದ 13 ವರ್ಷಗಳಿಂದ ಪತಿ-ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ಉಚಿತ ವಿದ್ಯುತ್​ ಪಡೆಯಲು ಷರತ್ತುಗಳು ಅನ್ವಯ: ಸಚಿವ ಜಾರ್ಜ್​

    ಕಠಿಣ ಕ್ರಮಕ್ಕೆ ಸೂಚನೆ

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಣಿಯಬಂಧ ಪೊಲೀಸ್​ ಠಾಣಾಧಿಕಾರಿ ಬಸಂತ್​ ಕುಮಾರ್​ ಸತ್​ಪತಿ ಮೃತದೇಹಗಳನ್ನು ತಮ್ಮವರದ್ದು ಎಂದು ಹೇಳಿಕೊಳ್ಳುತ್ತಾ ಹಲವರು ಪರಿಹಾರವನ್ನು ಮೊತ್ತವನ್ನು ಪಡೆಯಲು ಸುಳ್ಳನ್ನು ಪ್ರತಿಪಾದಿಸುತ್ತಿದ್ದಾರೆ. ಪ್ರಕರಣ ಸಂಬಂಧ ಮಹಿಳೆಯ ಪತಿ ದೂರು ದಾಖಲಿಸುವಂತೆ ಸೂಚಿಸಲಾಗಿದೆ.

    ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದ್ಧಾರೆ. ಆರೋಪಿತ ಮಹಿಳೆ ಪರಾರಿಯಾಗಿದ್ದು ಈ ಸಂಬಂಧ ಅವರನ್ನು ಪತ್ತೆಹಚ್ಚಲು ವಿಶೇಷ ತಂಡ ಒಂದನ್ನು ರಚಿಸಲಾಗಿದೆ ಎಂದು ಮಣಿಯಬಂಧ ಪೊಲೀಸ್​ ಠಾಣಾಧಿಕಾರಿ ಬಸಂತ್​ ಕುಮಾರ್​ ಸತ್​ಪತಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts