More

    16 ಸಾವಿರಕ್ಕೂ ಹೆಚ್ಚು ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯ ಹೃದಯಾಘಾತದಿಂದ ಸಾವು

    ಅಹಮದಾಬಾದ್​: 16 ಸಾವಿರಕ್ಕೂ ಹೆಚ್ಚು ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿದ ಹೃದ್ರೋಗ ತಜ್ಞ ಹಾರ್ಟ್​ ಅಟ್ಯಾಕ್​ನಿಂದ ಮೃತಪಟ್ಟಿರುವ ಘಟನೆ ಗುಜರಾತಿನ ಜಾಮ್​ನಗರದಲ್ಲಿ ನಡೆದಿದೆ.

    ಖ್ಯಾತ ಹೃದ್ರೋಗ ತಜ್ಞ ಡಾ.ಗೌರವ್ ಗಾಂಧಿ(41) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ವೈದ್ಯರ ಸಾವಿನಿಂದ ಶೋಕ ಮಡುಗಟ್ಟಿದ್ದು ಜಾಮ್​ನಗರದಲ್ಲಿ ಇದ್ದ ಅತ್ಯುತ್ತಮ ಹೃದ್ರೋಗ ತಜ್ಞರಲ್ಲಿ ಇವರು ಕೂಡ ಒಬ್ಬರು ಎಂದು ಹೇಳಲಾಗಿದೆ.

    ಈ ಕುರಿತು ಪೊಲೀಸ್​ ಅಧಿಕಾರಿ ಒಬ್ಬರು ಪ್ರತಿಕ್ರಿಯಿಸಿದ್ದು ಸೋಮವಾರ ರಾತ್ರಿ ಎಂದಿನಂತೆ ತಮ್ಮ ಕಾರ್ಯ ಮುಗಿಸಿ ಮನೆಗೆ ವಾಪಸ್ಸಾಗಿದ್ದ ವೈದ್ಯ ಗಾಂಧಿ ಅವರು ಮಲಗಿರುವಾಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ಧಾರೆ. ಎಂದಿನಂತೆ ಕುಟುಂಬಸ್ಥರ ಜೊತೆಗೆ ಆಹಾರ ಸೇವಿಸಿದ ಗೌರವ್ ಸಾಮಾನ್ಯವಾಗಿ ಇದ್ದರೂ ಅವರ​ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ.

    Gaurav Gandhi

    ಇದನ್ನೂ ಓದಿ: ವರ್ಷಪೂರ್ತಿ ಎಸ್​.ಆರ್. ಬೊಮ್ಮಾಯಿ ಜಯಂತಿ: ಮಾಜಿ ಸಿಎಂ ಬಸವರಾಜ

    ಮರುದಿನ ಬೆಳಗ್ಗೆ ಸುಮಾರು 6 ಘಂಟೆಗೆ ಕುಟುಂಬಸ್ಥರು ಅವರನ್ನು ಏಳಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವರು ಯಾರ ಮಾತಿಗೂ ಪ್ರತಿಕ್ರಿಯಿಸಲಿಲ್ಲ. ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ವೈದ್ಯರು ಗೌರವ್​ ಮೃತಪಟ್ಟಿರುವುದಾಗಿ ಘೋಷಿಸಿದ್ಧಾರೆ ಎಂದು ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ಧಾರೆ.

    ವೈದ್ಯ ಗೌರವ್​ ಗಾಂಧಿ ಇಲ್ಲಿಯವರೆಗೂ 16,000ಕ್ಕೂ ಹೆಚ್ಚು ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ. ಹೃದಯಾಘಾತದಿಂದ ಅವರು ಮೃತಪಟ್ಟಿರಬಹುದು ಎಂದು ವೈದ್ಯರು ತಿಳಿಸಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts