ನರ್ಸಿಂಗ್ ಪರೀಕ್ಷೆ ಬರೆಯುತ್ತಿದ್ದವಳು ನೇಣಿಗೆ ಕೊರಳೊಡ್ಡಿ ಪ್ರಾಣಬಿಟ್ಟಳು!

suicide 1
Published on

ಉತ್ತರಕನ್ನಡ: ನರ್ಸಿಂಗ್ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಸಂಭವಿಸಿದೆ.

ನಾಗರತ್ನಾ ಗೌಡ (21) ಮೃತ ದುರ್ದೈವಿ. ಸೋಮವಾರವಷ್ಟೇ ನರ್ಸಿಂಗ್ ಕೋರ್ಸ್ ಪರೀಕ್ಷೆ ಬರೆದು ಬಂದಿದ್ದ ನಾಗರತ್ನಾ, ಇನ್ನೊಂದು ಪರೀಕ್ಷೆಗೆ ತೆರಳುವ ಮುನ್ನವೇ ನೇಣಿಗೆ ಕೊರಳೊಡ್ಡಿ ಪ್ರಾಣಬಿಟ್ಟಿದ್ದಾಳೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬುಧವಾರ ನೇಣುಬಿಗಿದುಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net