

ಬೆಂಗಳೂರು: ವರ್ಷದ ಕೊನೆಯ ಗ್ರಹಣ ನಾಳೆ ಕಾರ್ತಿಕ ಹುಣ್ಣಿಮೆಯಂದು (ನ.8) ಮಧ್ಯಾಹ್ನ 2.39 ರಿಂದ ಸಂಜೆ 6.19 ರವರೆಗೆ ಚಂದ್ರ ಗ್ರಹಣ ಸಂಭವಿಸಲಿದೆ.
ಹಗಲು ಹೊತ್ತಲ್ಲೇ ಚಂದ್ರ ಗ್ರಹಣ ಸಂಭವಿಸಲಿದ್ದು, ಸಂಜೆ 5.54 ರಿಂದ 25 ನಿಮಿಷ ಗ್ರಹಣ ಗೋಚರಿಸಲಿದೆ. ಮಧ್ಯಾಹ್ನ ಬಿಸಿಲಿನ ಹಿನ್ನಲೆ, ಸೂರ್ಯಾಸ್ತದ ಬಳಿಕೆ ಗ್ರಹಣ ಗೋಚರವಾಗುವ ಸಾಧ್ಯತೆ ಇದೆ.
ಈ ಗ್ರಹಣವು ಗ್ರಸ್ತೋದಯವಾಗಿರುವುದರಿಂದ ಹಗಲಿನಲ್ಲಿ ಭೋಜನ ಮಾಡುವಂತಿಲ್ಲ. ಗ್ರಹಣ ನಂತರ ಸ್ನಾನ ಮಾಡಿ ಪಾಕಾದಿಗಳನ್ನು ತಯಾರಿಸಿ ಭೋಜನವನ್ನು ಸ್ವೀಕರಿಸಬಹುದು. ಬಾಲ,ವೃದ್ಧ, ರೋಗಿಗಳು ಈ ದಿನ ಬೆಳಿಗ್ಗೆ 10-20 ರೊಳಗೆ ಭೋಜನವನ್ನು ಸ್ವೀಕರಿಸಬಹುದಾಗಿದೆ.
ಚಂದ್ರಗ್ರಹಣವು ಭಾಗಶಃ ಈ ಬಾರಿ ಪೂರ್ಣವಾಗಿ ಗೋಚರಿಸಲಿದೆ. ನಾಳಿನ ಚಂದ್ರಗ್ರಹಣವು ಆಸ್ಟ್ರೇಲಿಯಾ, ಏಷ್ಯಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಈಶಾನ್ಯ ಯುರೋಪ್, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರದ ಭಾಗಗಳಲ್ಲಿ ಗೋಚರಿಸುತ್ತಿದೆ.
ಭಾರತದ ಪೂರ್ವ ಭಾಗಗಳಲ್ಲಿ ಸಂಪೂರ್ಣವಾಗಿ ಗೋಚರಿಸಲಿದ್ದು, ಇತರೆ ಭಾಗಗಳಲ್ಲಿ ಭಾಗಶಃ ಚಂದ್ರಗ್ರಹಣ ಗೋಚರವಾಗಲಿದೆ. ಕೋಲ್ಕತ್ತಾ, ಸಿಲಿಗುರಿ, ರಾಂಚಿ, ಪಾಟ್ನಾ ಮತ್ತು ಗುವಾಹಟಿ ನಗರಗಳಿಂದ ಗ್ರಹಣವನ್ನು ಪೂರ್ಣಪ್ರಮಾಣದಲ್ಲಿ ನೋಡಬಹುದಾಗಿದೆ.