110 ಕೆ.ಜಿ ಗಾಂಜಾ ವಶಪಡಿಸಿಕೊಂಡ ರೈಲ್ವೇ ಪೊಲೀಸರು!

ganja
Published on

ಗುವಾಹಟಿ: ರೈಲ್ವೇ ಪೊಲೀಸರು ನಿಷಿದ್ಧ ವಸ್ತುಗಳ ಕಳ್ಳ ಸಾಗಣಿಕೆ ವಿರುದ್ಧದ ಹೋರಾಟವನ್ನು ಮುಂದುವರೆಸಿದ್ದು, ಈಶಾನ್ಯ ಗಡಿ ರೈಲ್ವೆಯಲ್ಲಿ RPF ಪಡೆ ರೂ 11 ಲಕ್ಷ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದೆ.

ಈಶಾನ್ಯ ಗಡಿ ರೈಲ್ವೆ ಪತ್ರಿಕಾ ಪ್ರಕಟಣೆ ಹೊರಡಿಸದ್ದು ನವೆಂಬರ್ 4 ಮತ್ತು 5 ರಂದು ಅವರು ಸುಮಾರು 110 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

'ಲುಮ್‌ಡಿಂಗ್ ಮತ್ತು ಜಲ್ಪೈಗುರಿ ರೈಲು ನಿಲ್ದಾಣಗಳಲ್ಲಿ ನಿಯಮಿತ ತಪಾಸಣೆ ಸಮಯದಲ್ಲಿ ಅನಾಮಧೇಯರು ಬುಕ್​ ಮಾಡಿದ ಚೀಲಗಳಿಂದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಎನ್‌ಎಫ್ ರೈಲ್ವೆಯ ಸಿಪಿಆರ್‌ಒ ಸವ್ಯಸಾಚಿ ಮಾಹತಿ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net