More

    ಇಂಡಿಯಾ ಲಾಕ್​ಡೌನ್​: ಟ್ರೆಂಡಿಂಗ್​ಗೆ ಬೆಚ್ಚಿಬಿದ್ದ ಹಲವರು; ಅಸಲಿ ವಿಷಯ ಇದು..

    ಬೆಂಗಳೂರು: ಇಂಡಿಯಾ ಲಾಕ್​ಡೌನ್​.. #IndiaLockdown
    – ಹೌದು.. ಸದ್ಯ ಟ್ರೆಂಡಿಂಗ್​ನಲ್ಲಿ ಇರುವ ಈ ಹ್ಯಾಷ್​ಟ್ಯಾಗ್​ ಹಲವರನ್ನು ಬೆಚ್ಚಿ ಬೀಳಿಸಿದೆ. ಇದ್ದಕ್ಕಿದ್ದಂತೆ ಟ್ರೆಂಡ್ ಆಗಲಾರಂಭಿಸಿರುವ ‘ಲಾಕ್​ಡೌನ್’​ ಬಹಳಷ್ಟು ಮಂದಿ ಏನು ಎಂದು ಒಮ್ಮೆ ಟ್ವಿಟರ್​​ನಲ್ಲಿ ಸರಿಯಾಗಿ ಪರಿಶೀಲಿಸಿ ನೋಡುವಂತೆ ಮಾಡಿದೆ.

    ಟ್ವಿಟರ್​​ನಲ್ಲಿ #IndiaLockdown ಟಾಪ್ ಟ್ರೆಂಡಿಂಗ್​ನಲ್ಲಿರುವುದನ್ನು ನೋಡಿದ ಹಲವರು ಮತ್ತೇನಾದರೂ ಲಾಕ್​ಡೌನ್​ ಜಾರಿಯಾಯ್ತಾ, ಕರೊನಾ ಇದ್ದಕ್ಕಿದ್ದಂತೆ ಹೆಚ್ಚಾಯ್ತಾ, ವರ್ಕ್​ ಫ್ರಂ ಹೋಂ ಸಿಗುತ್ತಾ ಎಂದೆಲ್ಲ ಯೋಚಿಸಿದ್ದಾಗಿ ಹೇಳಿದ್ದಾರೆ.

    ಆದರೆ ಅಸಲಿಗೆ ಆಗಿದ್ದೇ ಬೇರೆ. ಏಕೆಂದರೆ ಇದು ಸಿನಿಮಾವೊಂದರ ಕಾರಣಕ್ಕಾಗಿ ಆಗಿರುವ ಟ್ರೆಂಡಿಂಗ್​. ದೇಶದಲ್ಲಿ 21 ದಿನಗಳ ಲಾಕ್​ಡೌನ್​ ಆಗಿರುವುದನ್ನೇ ಕಥಾಹಂದರವಾಗಿ ನಿರ್ಮಿಸಲಾಗಿರುವ ‘ಇಂಡಿಯಾ ಲಾಕ್​ಡೌನ್’ ಹಿಂದಿ ಸಿನಿಮಾದಿಂದಾಗಿ ಇಂಥದ್ದೊಂದು ಟ್ರೆಂಡಿಂಗ್ ಟ್ವಿಟರ್​ನಲ್ಲಾಗಿದೆ. ಮಧುರ್ ಭಂಡಾರ್ಕಾರ್ ನಿರ್ದೇಶನದ ಈ ಸಿನಿಮಾದಲ್ಲಿ ಶ್ವೇತಾ ಬಸು ಪ್ರಸಾದ್, ಪ್ರತೀಕ್ ಬಬ್ಬರ್, ಸಾಯಿ ತಮ್ಹನ್​ಕರ್, ಪ್ರಕಾಶ್ ಬೆಳವಾಡಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಡಿ. 2ರಂದು ತೆರೆ ಕಾಣಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts