ಅಪಾರ್ಟ್​ಮೆಂಟ್ ಹತ್ತನೇ ಮಹಡಿಯಿಂದ ಹಾರಿದ ವಿದ್ಯಾರ್ಥಿ; ತಪ್ಪು ಮಾಡಿ ಸಿಕ್ಕಿಬಿದ್ದ ಮುಜುಗರ ಎದುರಿಸಲಾಗದೆ ಸಾವಿಗೆ ಶರಣು..

Apartment F
Published on

ಬೆಂಗಳೂರು: ತಪ್ಪು ಮಾಡಿ ಸಿಕ್ಕಿಬಿದ್ದಿದ್ದರಿಂದ ಉಂಟಾದ ಮುಜುಗರ ಎದುರಿಸಲಾಗದೆ ಮನನೊಂದ ವಿದ್ಯಾರ್ಥಿಯೊಬ್ಬ ಅಪಾರ್ಟ್​​ಮೆಂಟ್​ವೊಂದರ ಹತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮೊಹಿನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಬೆಂಗಳೂರಿನ ನಾಗವಾರ ಬಳಿಯ ಆರ್.ಆರ್. ಸಿಗ್ನೇಚರ್ ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿದೆ. ಇಂದು ಮೊಹಿನ್ ಓದುತ್ತಿದ್ದ ಶಾಲೆಯಲ್ಲಿ ಇಂಗ್ಲಿಷ್ ಪರೀಕ್ಷೆ ನಡೆಯುತ್ತಿದ್ದಾಗ ಆತ ನಕಲು ಮಾಡಲು ಯತ್ನಿಸಿದ್ದ. ಅದಕ್ಕೆ ಬೈದ ಟೀಚರ್​ ಬಳಿಕ ತರಗತಿಯಿಂದ ಹೊರಗೆ ನಿಲ್ಲುವಂತೆ ಹೇಳಿದ್ದರು.

ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ಈತ ಬಳಿಕ ಶಾಲೆಯಿಂದ ಮರಳಿದ ಮೇಲೆ ಬೇರೊಂದು ಅಪಾರ್ಟ್​ಮೆಂಟ್​ಗೆ ಹೋಗಿ ಅಲ್ಲಿನ ಹತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net