

ಬೆಂಗಳೂರು: ವಿಧಾನಸಭೆ ಚುನಾವಣೆಯ ಸಮರಕ್ಕೆ ಹುರಿಯಾಳುಗಳು ಯಾರೆಂಬುದು ಸ್ಪಷ್ಟವಾಗುವ ಪ್ರಕ್ರಿಯೆ ಗುರುವಾರ (ಏ.13) ಆರಂಭವಾಗಲಿದೆ. 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಮತದಾನ ನಡೆಯಲಿದ್ದು, ಇದರ ಪೂರ್ವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ. ನಾಮಪತ್ರ ಸ್ವೀಕರಿಸಲು ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.