ರಸ್ತೆ ಸಂಪರ್ಕ ಇಲ್ಲದ್ದರಿಂದ ರೋಗಿಯನ್ನು 5 ಕಿ.ಮೀ. ದೂರ ಹೊತ್ತುಕೊಂಡು ಆಸ್ಪತ್ರೆಗೆ ಹೋದ ಕುಟುಂಬಸ್ಥರು!

Patient F
Published on

ಉತ್ತರಕನ್ನಡ: ರಾಜ್ಯದಲ್ಲಿ ಕೆಲವೊಂದು ಕುಗ್ರಾಮಗಳಲ್ಲಿ ಈಗಲೂ ಜನರು ತೀವ್ರ ಪರದಾಟ ಪಡಬೇಕಾದ ಪರಿಸ್ಥಿತಿ ಇದೆ. ಅಂಥದ್ದೇ ಒಂದು ಪ್ರಕರಣ ಇಂದು ವರದಿಯಾಗಿದ್ದು, ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಕುಟುಂಬಸ್ಥರು 5 ಕಿ.ಮೀ. ದೂರ ಹೊತ್ತುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವರಿಲಬೇಣ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಅನಾರೋಗ್ಯಪೀಡಿತ ವೃದ್ಧರೊಬ್ಬರನ್ನು ಜೋಲಿಯಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಇಲ್ಲಿನ ನೂರಾ ಪೊಕ್ಕಾ ಗೌಡ ಎಂಬ ಹಿರಿಯ ನಾಗರಿಕರೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು, ನಡೆದಾಡಲೂ ಆಗದ ಪರಿಸ್ಥಿತಿ ತಲುಪಿದ್ದರು. ಆದರೆ ಅವರಿರುವ ಗ್ರಾಮಕ್ಕೆ ರಸ್ತೆ ಸಂಪರ್ಕ ಇರದ್ದರಿಂದ 5 ಕಿ.ಮೀ. ದೂರ ಅವರನ್ನು ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕಾಡಿನ ಹಾದಿಯಲ್ಲಿ ಕಾಲ್ನಡಿಗೆಯಲ್ಲಿ ಹೊತ್ತುಕೊಂಡು ಬಂದ ಗ್ರಾಮಸ್ಥರು, ಬಳಿಕ ಅವರ್ಸಾದಿಂದ ವಾಹನದ ಮೂಲಕ ಅಂಕೋಲಾ ತಾಲೂಕಾಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಎಂಟು ಕುಟುಂಬಗಳು ವಾಸವಾಗಿರುವ ವರಿಲಬೇಣ ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net