ಇದು ಕಾಮುಕರು ಕಾಲ್ಕೀಳುವಂತೆ ಮಾಡುವ ಪಾದರಕ್ಷೆ; ಆ್ಯಂಟಿ ರೇಪ್ ಚಪ್ಪಲ್ ಕಂಡು ಹಿಡಿದ ವಿದ್ಯಾರ್ಥಿನಿ

Vijayalakshmi
Published on

ಬೆಂಗಳೂರು: ಹೆಣ್ಣು ಮಕ್ಕಳು, ಮಹಿಳೆಯರಿಗೆ ಇನ್ನು ಕಾಮುಕರ ವಿರುದ್ಧ ಹೋರಾಡಲು ಪಾದರಕ್ಷೆಯೇ ಗುರಾಣಿ ಆಗಲಿದೆ. ಮಾತ್ರವಲ್ಲ, ಕಾಲಲ್ಲೇ ಕಾಮುಕರನ್ನು ದೂರ ಇರಿಸಬಹುದು. ಇಂಥದ್ದೊಂದು ಚಪ್ಪಲಿಯನ್ನು ವಿದ್ಯಾರ್ಥಿಯೊಬ್ಬಳ ಕಂಡುಹಿಡಿದಿದ್ದಾಳೆ.

ಕಲಬುರಗಿಯ ಎಸ್​ಆರ್​​ಎನ್​ ಮೆಹ್ತ ಸ್ಕೂಲ್​ನ ಹತ್ತನೇ ತರಗತಿಯ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಬಿರಾದಾರ್ ಈ ಆ್ಯಂಟಿ ರೇಪ್ ಚಪ್ಪಲಿ ರೂಪಿಸಿದ್ದಾಳೆ. ಇದನ್ನು ಧರಿಸಿದ ಯುವತಿಯರು, ಮಹಿಳೆಯರು ಕಾಮುಕರ ವಿರುದ್ಧ ರಕ್ಷಣೆ ಪಡೆಯಬಹುದು ಮತ್ತು ತಮ್ಮ ಇರುವಿಕೆ ಬಗ್ಗೆ ಮನೆಯವರಿಗೆ ಸುಳಿವು ಕೂಡ ನೀಡಬಹುದು.

ಕಾಮುಕರು ಮೈಮುಟ್ಟಿದಾಗ ಅಥವಾ ಎರಗಿದಾಗ ಅವರನ್ನು ಈ ಚಪ್ಪಲಿಯಿಂದ ಒದ್ದರೆ ಸಾಕು, ಆಗ ಶಾಕ್ ಹೊಡೆಯಲಿದ್ದು ಕಾಮುಕ ದೂರ ಸರಿಯುತ್ತಾನೆ. ಮಾತ್ರವಲ್ಲ, ಇದರಲ್ಲಿ ಅಳವಡಿಸಲಾದ ಜಿಪಿಎಸ್​ನಿಂದ ಪಾಲಕರಿಗೆ ಲೈವ್ ಲೊಕೇಷನ್ ಮಾಹಿತಿಯೂ ರವಾನೆ ಆಗುತ್ತದೆ.

ಈಕೆ ತಾನು 7-8ನೇ ತರಗತಿಯಲ್ಲಿದ್ದಾಗಲೇ ಈ ಬಗ್ಗೆ ಅಧ್ಯಯನದಲ್ಲಿ ತೊಡಗಿದ್ದಳು. 2018ರಿಂದಲೇ ಇದರ ವಿನ್ಯಾಸದಲ್ಲಿ ನಿರತಳಾಗಿದ್ದ ವಿಜಯಲಕ್ಷ್ಮೀ ಅಂದಿನಿಂದಲೂ ಈ ಯೋಜನೆಯಲ್ಲಿ ತೊಡಗಿಕೊಂಡಿದ್ದಳು ಎಂಬುದಾಗಿ ಈಕೆಯ ಶಿಕ್ಷಕಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net