ದೇಶೀಯ ಕರೊನಾ ಲಸಿಕೆಗೆ ಆ.15ರ ಗಡುವು; ಕ್ಲಿನಿಕಲ್​ ಟ್ರಯಲ್​ ತ್ವರಿತಗೊಳಿಸುವುದಷ್ಟೇ ಉದ್ದೇಶ

covaxin
Published on

ನವದೆಹಲಿ: ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್​ ಸಜ್ಜುಗೊಳಿಸಲು ಆಗಸ್ಟ್​ 15ರ ಗಡುವು ನೀಡಲಾಗಿರುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

ಕೇಂದ್ರ ಆರೋಗ್ಯ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ಅನ್ನು ಆದಷ್ಟು ತ್ವರಿತವಾಗಿ ನಡೆಸಬೇಕಿದೆ. ಆದರೆ ಲಸಿಕೆಯ ಸುರಕ್ಷತೆ ಹಾಗೂ ಭದ್ರತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ರಾಜೇಶ್​ ಭೂಷಣ್​ ಹೇಳಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಮಹಾ ನಿರ್ದೇಶಕರು ಬರೆದಿರುವ ಪತ್ರದಲ್ಲಿ ಆಗಸ್ಟ್​ ಆ.15ರ ಗಡುವಿನ ಬಗ್ಗೆ ಎಲ್ಲಿಯೂ ಹೇಳಿಲ್ಲ. ಇಲ್ಲದ್ದನ್ನು ಸೃಷ್ಟಿಸುವುದು ಎಂದು ಹೇಳಿದ್ದಾರೆ.

ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಕ್ಲಿನಿಕಲ್​ ಟ್ರಯಲ್​ ಪ್ರಕ್ರಿಯೆಯನ್ನು ವೇಗವಾಗಿ ಮುಗಿಸಬೇಕೆಂದು ಐಸಿಎಂಆರ್​ ಮಹಾ ನಿರ್ದೇಶಕ ಬಲರಾಮ್​ ಭಾರ್ಗವ್​ ಹೇಳಿದ್ದರು. ಇದರರ್ಥ ಆಗಸ್ಟ್​ 15ರೊಳಗಾಗಿ ಫಲಿತಾಂಶ ಪಡೆಯುವ ಉದ್ದೇಶ ಇದರ ಹಿಂದಿದೆ ಎಂದು ಆರೋಪಿಸಲಾಗಿತ್ತು.

ಆದರೆ, ಲಸಿಕೆ ಅಭಿವೃದ್ಧಿ ಪಡಿಸಿರುವ ಹೈದರಾಬಾದ್​ನ ಭಾರತ್​ ಬಯೋಟೆಕ್​ ಇಂಟರ್​ ನ್ಯಾಷನ್​ ಸಂಸ್ಥೆಯೇ ತಿಳಿಸಿರುವಂತೆ ಮೊದಲ ಹಂತದ ಕ್ಲಿನಿಕಲ್​ ಟ್ರಯಲ್​ಗೆ ಕನಿಷ್ಠ ಮೂರು ತಿಂಗಳು ಬೇಕು ಎಂದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net