ಭಾರತವಷ್ಟೇ ಅಲ್ಲ, ಭಾರತದ ಔಷಧದ ಮೇಲೂ ಅತೀವ ನಂಬಿಕೆ ಬ್ರೆಜಿಲ್​ ಅಧ್ಯಕ್ಷರಿಗೆ...!

jair
Published on

ರಿಯೋ ಡಿ ಜನೈರೋ: ಭಾರತದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬ್ರೆಜಿಲ್​ ಅಧ್ಯಕ್ಷ ಜೈರ್​ ಬೊಲ್ಸನಾರೋಗೆ ಭಾರತದ ಮೇಲೆ ಅತೀವ ಪ್ರೀತಿ. ಈ ಕಾರಣಕ್ಕಾಗಿಯೇ ಪ್ರಧಾನಿ ಮೋದಿ ಇವರನ್ನು ಭಾರತಕ್ಕೆ ಆಹ್ವಾನಿಸಿದ್ದರು.

ಇದೀಗ ಇವರ ಭಾರತದ ಮೇಲಿನ ನಂಬಿಕೆ, ಪ್ರೀತಿ ಇನ್ನೊಂದು ರೀತಿಯಲ್ಲಿ ವ್ಯಕ್ತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕರೊನಾ ಸೋಂಕಿತರ ಮೇಲೆ ಮಲೇರಿಯಾ ನಿವಾರಕ ಮಾತ್ರೆ ಹೈಡ್ರೊಕ್ಸಿಕ್ಲೊರೋಕ್ವಿನ್​ ಅಂಥ ಪರಿಣಾಮವನ್ನೇನೂ ಬೀರುವುದಿಲ್ಲ ಎಂದು ಅದರ ಮೇಲಿನ ಪರೀಕ್ಷೆಯನ್ನು ಈಗಾಗಲೇ ಸ್ಥಗಿತಗೊಳಿಸಿದೆ. ಆದರೆ, ಭಾರತದಲ್ಲಿ ಇದನ್ನು ಇಂದಿಗೂ ಬಳಸಲಾಗುತ್ತಿದೆ ಎನ್ನುವುದು ಬೇರೆ ಮಾತು.

ಜೈರ್​ ಬೊಲ್ಸನಾರೋ ಕೋವಿಡ್​ ರೋಗಿಯಾಗಿದ್ದು, ಹೈಡ್ರೊಕ್ಸಿಕ್ಲೊರೋಕ್ವಿನ್​ ಮಾತ್ರೆ ಸೇವಿಸುತ್ತಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಉಳಿದವರು ಇದನ್ನು ಪಾಲಿಸುವಂತೆ ಸಂದೇಶ ನೀಡುತ್ತಿದ್ದಾರೆ. ಮಲೇರಿಯಾ ನಿವಾರಕ ಮಾತ್ರೆಗೆ ಇವರೇ ರಾಯಭಾರಿಯಂತಾಗಿದ್ದಾರೆ.

ನಾನು ಹೈಡ್ರೊಕ್ಸಿಕ್ಲೊರೋಕ್ವಿನ್​ ಮಾತ್ರಯನ್ನು ನಂಬುತ್ತೇನೆ. ಮತ್ತು ನೀವು ಎಂದು ಫೇಸ್​ಬುಕ್​ನಲ್ಲಿ ಹಸನ್ಮುಖಿಯಾಗಿ ಹೇಳಿಕೊಂಡಿದ್ದಾರೆ. ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೂಡ ಹೈಡ್ರೊಕ್ಸಿಕ್ಲೊರೋಕ್ವಿನ್​ ಮಾತ್ರೆ ಸೇವಿಸುತ್ತಿರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net