ಭಾರೀ ಚರ್ಚೆಯಾಗ್ತಿದೆ ನೀತಾ ಅಂಬಾನಿ ಧರಿಸಿದ ನೆಕ್ಲೇಸ್! ಇದರ ಬೆಲೆ ಕೇಳಿದ್ರೆ ತಲೆ ಸುತ್ತಿ ಬೀಳ್ತೀರಾ

WhatsApp Image 2024-03-05 at 12.58.56 PM
Published on

ಮುಂಬೈ: ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪ್ರೀ-ವೆಡ್ಡಿಂಗ್ ಸಮಾರಂಭ ಇತ್ತೀಚೆಗಷ್ಟೇ ಅದ್ದೂರಿಯಾಗಿ ನೆರವೇರಿದ್ದು, ದೇಶ-ವಿದೇಶಗಳಿಂದ ಗಣ್ಯಾತಿ ಗಣ್ಯರು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದು, ಅನಂತ್-ರಾಧಿಕಾ ಜೋಡಿಗೆ ಶುಭಹಾರೈಸಿದರು. ಮೂರು ದಿನಗಳ ಕಾಲ ನಡೆದ ಈ ಅದ್ದೂರಿ ಈವೆಂಟ್​ನಲ್ಲಿ ಮುಖೇಶ್-ನೀತಾ ಅಂಬಾನಿ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕಂಗೊಳಿಸಿದರು.

ಒಂದೆಡೆ ಇಡೀ ಕಾರ್ಯಕ್ರಮದಲ್ಲಿ ಅನಂತ್ ಮತ್ತು ರಾಧಿಕಾ ಜೋಡಿ ಮಿಂಚಿದರೆ, ಮತ್ತೊಂದೆಡೆ ಮುಖೇಶ್ ದಂಪತಿ ಕೂಡ ಅತ್ಯಾಕರ್ಷಕವಾಗಿ ಕಂಗೊಳಿಸಿದರು. ಅದರಲ್ಲೂ ಅನಂತ್ ತಾಯಿ ನೀತಾ ಅಂಬಾನಿ ಹೆಸರಾಂತ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ಡಿಸೈನ್ ಮಾಡಿದ ಕೈಮಗ್ಗದ ಕಾಂಚೀಪುರಂ ಸೀರೆಯನ್ನು ಧರಿಸುವ ಮೂಲಕ ಎಲ್ಲರ ಗಮನಸೆಳೆದರು. ಸೀರೆ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಅವರ ಕತ್ತಿನಲ್ಲಿ ಕಂಡುಬಂದ ವಜ್ರದ ನೆಕ್ಲೇಸ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ನೀತಾ ಅಂಬಾನಿ ಧರಿಸಿರುವ ಹಸಿರು ಬಣ್ಣದ ನೆಕ್ಲೇಸ್ ಸದ್ಯ ನೆಟ್ಟಿಗರ ಹುಬೇರಿಸುತ್ತಿದ್ದು, ಇದರ ಬೆಲೆ ಎಷ್ಟಿರಬಹುದು ಎಂಬ ಲೆಕ್ಕಾಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ನೀತಾ ಧರಿಸಿರುವ ಈ ಒಂದು ನಿರ್ದಿಷ್ಟ ನೆಕ್ಲೇಸ್‌ನ ಅಂದಾಜು ಬೆಲೆ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದ್ದು, ಅದರ ಬೆಲೆ ಬರೋಬ್ಬರಿ 400-500 ಕೋಟಿ ರೂ. ಇದೆ ಎಂದು ಮೂಲಗಳು ತಿಳಿಸಿವೆ!,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net