More

    ಉತ್ತರ ಇಸ್ರೇಲ್‌: ಕ್ಷಿಪಣಿ ದಾಳಿಯಲ್ಲಿ ಕೇರಳ ಮೂಲದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

    ಇಸ್ರೇಲ್‌: ಉತ್ತರ ಇಸ್ರೇಲ್‌ನಲ್ಲಿ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಲೆಬನಾನ್‌ನಿಂದ ಹಾರಿಸಲಾದ ಆ್ಯಂಟಿ-ಟ್ಯಾಂಕ್ ಮಿಸೈಲ್ ಇಸ್ರೇಲ್‌ನ ಉತ್ತರದ ಗಡಿಯಲ್ಲಿರುವ ಮಾರ್ಗಲಿಯೊಟ್ ಸಮುದಾಯದ ಬಳಿಯ ಉದ್ಯಾನವೊಂದಕ್ಕೆ ಬಿದ್ದು, ಭಾರತೀಯ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾರೆ.

    ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಈ ಘಟನೆ ಸೋಮವಾರ ಸಂಭವಿಸಿದೆ. ಮೂವರೂ ಭಾರತೀಯರು ಕೇರಳದ ನಿವಾಸಿಗಳು ಎಂದು ವರದಿ ಹೇಳುತ್ತದೆ. ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಇಸ್ರೇಲ್‌ನ ಉತ್ತರದ ಗೆಲಿಲಿ ಪ್ರದೇಶದ ಮೊಶಾವ್ (ಸಾಮೂಹಿಕ ಕೃಷಿ ಸಮುದಾಯ) ಮಾರ್ಗಲಿಯೊಟ್‌ನ ತೋಟಕ್ಕೆ ಕ್ಷಿಪಣಿ ಅಪ್ಪಳಿಸಿತು ಎಂದು ರಕ್ಷಣಾ ಸೇವೆಯ ವಕ್ತಾರ ಮ್ಯಾಗೆನ್ ಡೇವಿಡ್ ಆಡಮ್ (ಎಂಡಿಎ) ಝಕಿ ಹೆಲ್ಲರ್ ಪಿಟಿಐಗೆ ತಿಳಿಸಿದ್ದಾರೆ. ಇದರಲ್ಲಿ ಓರ್ವ ಭಾರತೀಯ ಪ್ರಜೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

    ಕೇರಳದ ಕೊಲ್ಲಂ ಮೂಲದ ಪಟ್ನಿಬಿನ್ ಮ್ಯಾಕ್ಸ್‌ವೆಲ್ ಎಂಬಾತ ಮೃತನಾದ ವ್ಯಕ್ತಿ. ಗಾಯಗೊಂಡ ಇಬ್ಬರು ಭಾರತೀಯರನ್ನು ಬುಷ್ ಜೋಸೆಫ್ ಜಾರ್ಜ್ ಮತ್ತು ಪಾಲ್ ಮೆಲ್ವಿನ್ ಎಂದು ಗುರುತಿಸಲಾಗಿದೆ. ಜಾರ್ಜ್ ಅವರನ್ನು ಪೆಟಾಹ್ ಟಿಕ್ವಾದಲ್ಲಿನ ಬೆಲಿನ್ಸನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಅವರ ಸ್ಥಿತಿ ಸುಧಾರಿಸುತ್ತಿದೆ. ಸದ್ಯಕ್ಕೆ ನಿಗಾದಲ್ಲಿ ಇರಿಸಲಾಗಿದೆ.

    ಮಾಧ್ಯಮ ವರದಿಗಳ ಪ್ರಕಾರ, ಲೆಬನಾನ್‌ನ ಶಿಯಾಟ್ ಹಿಜ್ಬುಲ್ಲಾ ಬಣವು ಈ ದಾಳಿಯನ್ನು ನಡೆಸಿದೆ, ಇದು ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಹಮಾಸ್‌ಗೆ ಬೆಂಬಲವಾಗಿ ಅಕ್ಟೋಬರ್ 8 ರಿಂದ ಉತ್ತರ ಇಸ್ರೇಲ್‌ನಲ್ಲಿ ಪ್ರತಿದಿನ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುತ್ತಿದೆ.

    VIDEO | ಗ್ರ್ಯಾಂಡ್ ಎಂಟ್ರಿ ಕೊಟ್ಟ ರಾಧಿಕಾ ಮರ್ಚೆಂಟ್; ಅಂಬಾನಿ ಸೊಸೆ ರಾಯಲ್ ಲುಕ್​​​ಗೆ ಅನಂತ್​​​ ಮಾತ್ರವಲ್ಲ, ಅತಿಥಿಗಳು ಫಿದಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts