

ಗುಜರಾತ್: ಮುಖೇಶ್ ಅಂಬಾನಿ ಪುತ್ರ ಅನಂತ್ ಮತ್ತು ರಾಧಿಕಾ ಅವರ ವಿವಾಹ ಪೂರ್ವ ಕಾರ್ಯಕ್ರಮವನ್ನು ಮಾರ್ಚ್ 1 ರಿಂದ ಮಾರ್ಚ್ 3 ರವರೆಗೆ ಆಯೋಜಿಸಲಾಗಿತ್ತು. ಬಾಲಿವುಡ್, ಹಾಲಿವುಡ್‌ನ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈಗ ಮದುವೆಯ ವಿವಾಹ ಪೂರ್ವ ಕಾರ್ಯಕ್ರಮ ಮುಗಿದಿದೆ. ಇದೀಗ ಹಲವು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಅಂದಹಾಗೆ ವೈರಲ್ ಆಗಿರುವ ವಿಡಿಯೋದಲ್ಲಿ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳ ಕಣ್ಣುಗಳು ನೇರವಾಗಿ ವಧುವಿನ ಎಂಟ್ರಿಯತ್ತ ಹಾದು ಹೋದವು. ಈ ಸಮಯದಲ್ಲಿ ರಾಧಿಕಾ ಮರ್ಚೆಂಟ್ ಮೆಲ್ಲನೆ ಅನಂತ್ ಅಂಬಾನಿ ಬಳಿಯತ್ತ ನಡೆದು ಹೋಗಿ ನೃತ್ಯ ಮಾಡಿದರು. ಅನಂತ್ ವೇದಿಕೆಯ ಮೇಲೆ ನಿಂತು ತನ್ನ ವಧುವನ್ನು ಪ್ರೀತಿಯಿಂದ ನೋಡುತ್ತಿದ್ದರು. ಇವರಿಬ್ಬರ ಈ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋಗೆ ಜನರು ಭಾರೀ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ರಾಧಿಕಾ ಗ್ರ್ಯಾಂಡ್ ಎಂಟ್ರಿ ವಿಡಿಯೋದಲ್ಲಿ, ರಾಧಿಕಾ ಮರ್ಚೆಂಟ್ ಗೋಲ್ಡನ್ ಕಲರ್ ಬಣ್ಣದ ಲೆಹೆಂಗಾವನ್ನು ಧರಿಸಿದ್ದು, ಅದರಲ್ಲಿ ಅವರು ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಅನಂತ್ ಬಿಳಿ ಬಣ್ಣದ ಶೇರ್ವಾನಿ ಧರಿಸಿದ್ದಾರೆ. ಅನಂತ್ ಮತ್ತು ರಾಧಿಕಾ ಹೊರತುಪಡಿಸಿ, ಇಡೀ ಅಂಬಾನಿ ಕುಟುಂಬವು ತುಂಬಾ ಸೊಗಸಾಗಿ ಕಾಣುತ್ತಿದೆ.
ವಿಡಿಯೋದಲ್ಲಿ ಮುಖೇಶ್ ಅಂಬಾನಿ, ನೀತಾ ಅಂಬಾನಿ, ಶ್ಲೋಕಾ ಮೆಹ್ತಾ ಮತ್ತು ಇಶಾ ಪಿರಮಾಲ್ ಚಪ್ಪಾಳೆ ತಟ್ಟುವ ಮೂಲಕ ರಾಧಿಕಾ ಮರ್ಚೆಂಟ್ ಅನ್ನು ಸ್ವಾಗತಿಸಿದರು. ರಾಧಿಕಾ 'ದೇಖಾ ತೆನು ಪೆಹಲಿ ಪೆಹಲಿ ಬಾರ್ ವೆ' ಹಾಡಿಗೆ ನೃತ್ಯ ಮಾಡುತ್ತಾ ವೇದಿಕೆಯ ಕಡೆಗೆ ಬರುತ್ತಾರೆ. ಅನಂತ್ ಅವರನ್ನು ನೋಡುತ್ತಲೇ ಇರುತ್ತಾರೆ. ಇವರಿಬ್ಬರ ನಡುವಿನ ಈ ಕ್ಷಣವನ್ನು ನೋಡಿದ ಅನಂತ್ ಮತ್ತು ರಾಧಿಕಾ ಪೋಷಕರ ಕಣ್ಣಲ್ಲಿ ನೀರು ಸ್ಪಷ್ಟವಾಗಿ ಗೋಚರಿಸುತ್ತಿದೆ.