

ಮುಂಬೈ: ಇತ್ತೀಚೆಗೆ ಜಾಮ್ನಗರದಲ್ಲಿ ನಡೆದ ವಿವಾಹ ಪೂರ್ವದ ಅನ್ನಸೇವೆಯಲ್ಲಿ ರಾಧಿಕಾ ಮರ್ಚೆಂಟ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಅವರು ತುಂಬಾ ಪ್ರೀತಿ ಮತ್ತು ಗೌರವದಿಂದ ಗ್ರಾಮಸ್ಥರಿಗೆ ಊಟ ಬಡಿಸುತ್ತಿದ್ದಾರೆ.
ರಾಧಿಕಾ ಜೊತೆಗೆ ಅನಂತ್ ಕೂಡ ಜೈ ಶ್ರೀ ಕೃಷ್ಣ ಎಂದು ಹೇಳುತ್ತಾ ಜನರಿಗೆ ಊಟ ಬಡಿಸುತ್ತಿದ್ದಾರೆ. ಈ ವಿಡಿಯೋಗಳನ್ನು ನೋಡಿದ ಜನ ಈಗ ಅಂಬಾನಿ ಕುಟುಂಬದ ಕಿರಿಯ ಸೊಸೆ ರಾಧಿಕಾ ತುಂಬಾ ಸುಸಂಸ್ಕೃತೆ ಎಂದು ಹೇಳಲು ಶುರು ಮಾಡಿದ್ದಾರೆ.
ರಾಧಿಕಾ ಅವರ ಅನೇಕ ವಿಡಿಯೋಗಳು ವೈರಲ್ ಆಗಿದ್ದು, ಅದರಲ್ಲಿ ಅವರು ನಗು ನಗುತ್ತಾ ಇರುವುದನ್ನು ಕಾಣಬಹುದು. ಇದನ್ನು ಜನರು ತುಂಬಾ ಇಷ್ಟಪಡುತ್ತಿದ್ದಾರೆ. ವಿಡಿಯೋಗಳಲ್ಲಿ ರಾಧಿಕಾ ಜನರು ನೀಡಿದ ಶಾಲುಗಳು, ಹೂವುಗಳು ಮತ್ತು ಉಡುಗೊರೆಗಳನ್ನು ಅತ್ಯಂತ ಸರಳತೆ ಮತ್ತು ಪ್ರೀತಿಯಿಂದ ಸ್ವೀಕರಿಸುತ್ತಿರುವುದನ್ನು ಕಾಣಬಹುದು.
ಅಷ್ಟೇ ಅಲ್ಲ, ಪದೇ ಪದೇ ಕೈಗಳನ್ನು ಮಡಚಿ ಪ್ರೀತಿಯಿಂದ ಸ್ವಾಗತಿಸುತ್ತಾರೆ. ಹಳ್ಳಿಯ ಹೆಂಗಸರು ರಾಧಿಕಾರನ್ನು ನೋಡಿ ಇಷ್ಟು ಹಣವಿದ್ದರೂ ಈಕೆಗೆ ಅಹಂಕಾರವೇ ಇಲ್ಲ ಎಂದು ಆಕೆಯ ವರ್ತನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಪಾಪರಾಜಿಗಳ ಜೊತೆಗೂ ಪ್ರೀತಿಯ ಮಾತುಕತೆ
ರಾಧಿಕಾರನ್ನು ಕವರ್ ಮಾಡಲು ಬಂದ ಪಾಪರಾಜಿ ಜೊತೆಗಿನ ಸಂಭಾಷಣೆಯ ವಿಡಿಯೋ ಕೂಡ ವೈರಲ್ ಆಗುತ್ತಿದ್ದು, ಇದರಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಪಾಪ್ಗಳೊಂದಿಗೆ ತುಂಬಾ ಪ್ರೀತಿಯಿಂದ ಮಾತನಾಡುತ್ತಿರುವುದು ಕಂಡುಬಂದಿದೆ. ಫೋಟೋ ಕ್ಲಿಕ್ಕಿಸಿದ ನಂತರ ರಾಧಿಕಾ ಅವರು ಪಾಪ್ಗಳನ್ನು ಕೇಳುತ್ತಿದ್ದಾರೆ, ನಿಮಗೆ ಜಾಮ್ನಗರ ಇಷ್ಟವಾಯಿತೇ, ನೀವು ತುಂಬಾ ಮೋಜು ಮಾಡಿದ್ದೀರಿ..ಇಲ್ಲಿ ಗಾಳಿ ಮತ್ತು ನೀರು ಹೇಗಿದೆ ಎಂದು ಕೇಳುತ್ತಿದ್ದಾರೆ.
ಏಷ್ಯಾದ ಅತಿದೊಡ್ಡ ಉದ್ಯಮಿ ಮತ್ತು 10,000 ಕೋಟಿ ರೂ.ಗಳ ಒಡೆಯನಾಗಿದ್ದರೂ, ಮುಖೇಶ್ ಅಂಬಾನಿ ತನ್ನ ಹಳ್ಳಿಯ ಜನರೊಂದಿಗೆ ಮಾತನಾಡುತ್ತಿರುವುದನ್ನು ನೋಡಿದ ಜನರು ಕೊಂಡಾಡುತ್ತಿದ್ದಾರೆ. ಮುಕೇಶ್ ಅಂಬಾನಿ ಪ್ರತಿಯೊಬ್ಬ ಗ್ರಾಮಸ್ಥರೊಂದಿಗೆ ಮಾತನಾಡುತ್ತಾ, ಕೈಮುಗಿದು ನಮಸ್ಕರಿಸುವುದು ಮತ್ತು ತಿನ್ನುವುದು, ಕುಡಿಯುವುದು ಕಂಡುಬಂದಿದೆ.
ಅಂಬಾನಿ ಕುಟುಂಬದಲ್ಲಿ ವಿವಾಹದ ಮೊದಲು, ಜಾಮ್ನಗರದಲ್ಲಿ ಅನ್ನದಾನ ಸೇವೆ ಅಂದರೆ ಔತಣವನ್ನು ಆಯೋಜಿಸಲಾಗುತ್ತದೆ. ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ ಮದುವೆಗೂ ಮುನ್ನವೂ ಇದನ್ನು ಆಯೋಜಿಸಲಾಗಿತ್ತು.